August 12, 2026

2 ಬೈಕ್ ಗಳಿಗೆ ಲಾರಿ ಢಿಕ್ಕಿ: ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

0
image_editor_output_image1911676436-1689324793365.jpg

ಬೆಂಗಳೂರು: 2 ಬೈಕ್ ಗಳಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಗೆಸ್ಟ್ ಲೈನ್ ಗೇಟ್ ಬಳಿ ನಡೆದಿದೆ.

ಮಂಗಮ್ಮನಪಾಳ್ಯ ನಿವಾಸಿ ಮಂಜಪ್ಪ(32) ಮೃತ ರ್ದುದೈವಿ. ಇನ್ನೊಬ್ಬ ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ.

ಬೈಕ್ ಸವಾರರಿಬ್ಬರು ಬೈಕ್ ಚಲಾಯಿಸಿಕೊಂಡು ಹೋದ ಸಂದರ್ಭ ಹಿಂಬದಿಯಿಂದ ಬಂದ ಅಪರಿಚಿತ ಲಾರಿಯೊಂದು 2 ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!