August 12, 2026

ಮಂಗಳೂರು: ಮುಸ್ಲಿಂ ಸಂಘಟನೆಗಳ ಒಕ್ಕೂಟದ ಪದಾಧಿಕಾರಿ ಸಿ.ಎಂ.ಮುಸ್ತಫಾ ನಿಧನ

0
image_editor_output_image-1162718759-1689239563853.jpg

ಮಂಗಳೂರು: ಮುಸ್ಲಿಂ ಸಂಘಟನೆಗಳ ಒಕ್ಕೂಟದ ಪದಾಧಿಕಾರಿ ಮಂಗಳೂರಿನ ಅನ್ಸಾರಿ ರಸ್ತೆಯ ನಿವಾಸಿ ಸಿ.ಎಂ.ಮುಸ್ತಫಾ (62) ಅವರು ಜು.13ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದರು.

ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ಮತ್ತು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಪದಾಧಿಕಾರಿ ಹಾಗೂ ಮಂಗಳೂರು ‌ಧಕ್ಕೆ ಮೀನು ಮಾರಾಟ ‌ಮತ್ತು ಕಮಿಷನ್ ಏಜೆಂಟ್ ಸಂಘದ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದರು.‌

ಮೃತರ ನಿಧನಕ್ಕೆ ಮಾಜಿ ಮೇಯರ್, ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ‌ ಒಕ್ಕೂಟದ ಅಧ್ಯಕ್ಷ ‌ಕೆ.‌ಅಶ್ರಫ್ ಸಂತಾಪ‌ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!