March 13, 2026

ವಿಟ್ಲ: ಆಲ್ಟೋ ಕಾರು‌-ಬೈಕ್ ನಡುವೆ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ

0
IMG-20230712-WA0017.jpg

ವಿಟ್ಲ: ಆಲ್ಟೋ ಕಾರು‌ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಲ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕೊಡಂಗಾಯಿ ಮೈತ್ರೆಯಿ ಗುರುಕುಲದ ಬಳಿ ನಡೆದಿದೆ.

ಕಡಂಬು‌ ನಿವಾಸಿಗಳಾದ‌ ಸಿನಾನ್ ಮತ್ತು ಫೈಜಲ್ ಬೈಕ್ ಸವಾರರು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರೊಬ್ಬನ ತಲೆ ಕಾರಿನ ಗಾಜಿಗೆ ತಾಗಿ ಗಾಜು ಪುಡಿಪುಡಿಯಾಗಿ ಗಂಭೀರ ಗಾಯವಾಗಿದೆ ಎನ್ನಲಾಗಿದೆ.

ಕಾರು ಚಾಲಕ ಸುಳ್ಯ ಸಮೀಪದ ಕನಕಮಜಲು ನಿವಾಸಿ ಗೋಪಾಲಕೃಷ್ಣ ಅವರು ತನ್ನ ಪುತ್ರಿಯನ್ನು ಮುಡಿಪು ನವೋದಯ ವಸತಿ ಶಾಲೆಗೆ ದಾಖಲಿಸಿ ವಾಪಾಸಾಗುತ್ತಿದ್ದರು.

ಸ್ದಳಕ್ಕೆ ವಿಟ್ಲ ಪೊಲೀಸರು ಮತ್ತು ಹೈವೇ ಪೇಟ್ರೋಲ್ ಪೊಲೀಸರು ಆಗಮಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!