June 26, 2026

ಬಂಟ್ವಾಳ |ತಲೆದಿಂಬು, ಹಾಸಿಗೆ ತಯಾರಿಕಾ ಪ್ಯಾಕ್ಟರಿಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

0
image_editor_output_image1971152072-1689151579824.jpg

ಬಂಟ್ವಾಳ: ತಲೆದಿಂಬು ಹಾಗೂ ಹಾಸಿಗೆ ತಯಾರಿಕಾ ಪ್ಯಾಕ್ಟರಿಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಸಜೀಪ ಗ್ರಾಮದ ಆಲಾಡಿ ಸಮೀಪದ ಮುಂಡಕೋಡಿ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಸಜೀಪ ನಿವಾಸಿ ಲತೀಫ್ ಎಂಬವರಿಗೆ ಸೇರಿದ ಪ್ಯಾಕ್ಟರಿ ಇದಾಗಿದೆ.

ಪ್ಯಾಕ್ಟರಿಯೊಳಗೆ ಲಕ್ಷಾಂತರ ರೂ.ಮೌಲ್ಯದ ಮೆಷಿನರಿಗಳು ಇದ್ದು, ಬೆಂಕಿ ಹಚ್ಚಿಕೊಂಡಿದೆ. ಇದರ ಜೊತೆಗೆ ಲಕ್ಷಾಂತರ ರೂ ಗಳ ತಲೆದಿಂಬು ಹಾಗೂ ಹಾಸಿಗೆಗಳು ದಾಸ್ತಾನು ಇವೆ.

ಸದ್ಯ ದಾಸ್ತಾನು ಕೊಠಡಿಗೆ ಬೆಂಕಿ ಹಚ್ಚಿಕೊಂಡಿದೆಯಾದರೂ ದೊಡ್ಡ ಮಟ್ಟದಲ್ಲಿ ಬೆಂಕಿಗೆ ಆಹುತಿಯಾಗುವುದನ್ನು ನೀರು ಹಾಯಿಸಿ ತಡೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!