August 12, 2026

ಮಂಗಳೂರು: ಪತ್ರಕರ್ತ ಪಾವ್ಲ್‌ ಬೆಂಜಮಿನ್‌ ನಿಧನ

0
image_editor_output_image-1510807528-1689143033328.jpg

ಮಂಗಳೂರು: ನಿವೃತ್ತ ಪತ್ರಕರ್ತ ಹಾಗೂ ಬೆಂಗಳೂರಿನ ಸೈಂಟ್‌ ಪಾವ್ಲ್‌ಸ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಅಸಿಸ್ಟಂಟ್‌ ಪ್ರೊಫೆಸರ್‌ ಆಗಿದ್ದ ಪಾವ್ಲ್‌ ಬೆಂಜಮಿನ್‌ ಅವರು ನಿಧನ ಹೊಂದಿದ್ದಾರೆ.

ಮೈಸೂರು ಸಮೀಪದ ಕೊಳ್ಳೇಗಾಲ ನಿವಾಸಿಯಾಗಿದ್ದ ಅವರು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜು ಮತ್ತು ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ.

ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದ ಅವರು ಮಂಗಳೂರಿನ ವೆಬ್‌ಸೈಟ್‌ ಗಳಲ್ಲಿ ಮತ್ತು ಪತ್ರಿಕೆಯಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿದ್ದರು.

ಬಳಿಕ ಹೊಸ ದಿಲ್ಲಿಗೆ ಹಾಗೂ ಇತ್ತೀಚೆಗೆ ಬೆಂಗಳೂರಿನ ಸೈಂಟ್‌ ಪಾವ್ಲ್‌ಸ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾಗಿ ಸೇರ್ಪಡೆ ಗೊಂಡಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!