August 12, 2026

ಮಂಗಳೂರಿನಿಂದ ದುಬೈಗೆ ಹೊರಡಬೇಕಾದ ವಿಮಾನ ವಿಳಂಬ

0
image_editor_output_image1928594550-1689055444142.jpg

ಮಂಗಳೂರು: ಮಂಗಳೂರಿನಿಂದ ದುಬೈಗೆ ಹೊರಡಬೇಕಾದ ವಿಮಾನ ವಿಳಂಬ ಹಿನ್ನೆಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುತ್ತಿರುವಂತಹ ಘಟನೆ ನಡೆದಿದೆ.

ನಿನ್ನೆ(ಜು.10) ರಾತ್ರಿ 11‌ಕ್ಕೆ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಫ್ಲೈಟ್ ವಿಳಂಬವಾಗಿದೆ. ಆದ್ರೆ ಅಧಿಕಾರಿಗಳು ಪ್ರಯಾಣಿಕರಿಗೆ ಬದಲಿ ಫ್ಲೈಟ್ ವ್ಯವಸ್ಥೆ ಮಾಡದೆ ಸುಮ್ಮನಿದ್ದಾರೆ.

ಇದರಿಂದ ನಿನ್ನೆ ರಾತ್ರಿಯಿಂದ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಪರದಾಡುವಂತಾಗಿದೆ.

ವಿಮಾನದ ಇಂಜಿನ್ ಹಾಳಾಗಿದೆ ಎಂದು ಪ್ರಯಾಣಿಕರಿಗೆ ಮಾಹಿತಿ ಕೊಟ್ಟು ಅಧಿಕಾರಿಗಳು ಸುಮ್ಮನಾಗಿದ್ದಾರೆ. ಆದ್ರೆ ಪ್ರಯಾಣಿಕರಿಗೆ ಯಾವುದೇ ಬದಲಿ ಅನುಕೂಲ ಮಾಡಿಕೊಟ್ಟಿಲ್ಲ.

ಹೀಗಾಗಿ ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲೇ ಕಾದ ಪ್ರಯಾಣಿಕರು ರೋಸಿ ಹೋಗಿದ್ದಾರೆ. ಏರ್ಪೋರ್ಟ್ ಅಧಿಕಾರಿಗಳು ಮತ್ತು ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದಿದ್ದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!