February 4, 2026

ಬಂಟ್ವಾಳ: ಭಾರೀ ಮಳೆಗೆ ತಾಲೂಕಿನ ವಿವಿಧೆಡೆ ಅಪಾರ ಹಾನಿ

0
image_editor_output_image-890162686-1688536151127.jpg

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಂಟ್ವಾಳ ತಾಲೂಕಿನ ವಿವಿಧೆಡೆ ಅಪಾರ ಹಾನಿ ಸಂಭವಿಸಿದೆ.

ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ತಾಲೂಕಿನ ತುಂಬೆ ಗ್ರಾಮದ ನಿವಾಸಿಯಾಗಿರುವ ಪದ್ಮನಾಭ ಎಂಬವರ ಮನೆಯಲ್ಲಿ ಮಳೆಯಿಂದಾಗಿ ಮನೆಯ ತಡೆಗೋಡೆ ಕುಸಿದು ದನದ ಕೊಟ್ಟಿಗೆಗೆ ಅಪಾರ ಹಾನಿ ಉಂಟಾಗಿದೆ.

ಸಮೀಪದ ಕೇಪು ಗ್ರಾಮದ ಕೋಡಂದೂರು ಜಯರಾಮ ನಾಯ್ಕ ಅವರ ತೋಟದಲ್ಲಿ ಬೃಹತ್ ಗಾತ್ರದ ಮರಬಿದ್ದು ಅಡಿಕೆ ಮರಗಳಿಗೆ ಹಾನಿಯಾಗಿದೆ.

ಮಾಣಿಲ ಗ್ರಾಮದ ಓಟೆಪಡು ಎಂಬಲ್ಲಿ ನಾರಾಯಣ ನಾಯ್ಕ ಅವರ ಕೊಟ್ಟಿಗೆಗೆ ಗುಡ್ಡ ಕುಸಿದು ಹಾನಿಯಾಗಿದೆ.

ಸಜೀಪಮೂಡದಲ್ಲಿ ಸೈನಾಜ್ ಎಂಬವರ ಮನೆಯಲ್ಲಿ ಶೌಚಾಲಯದ ಶೀಟ್ ಗೆ ಹಾನಿಯಾಗಿದೆ.

Leave a Reply

Your email address will not be published. Required fields are marked *

error: Content is protected !!