ಕಲ್ಲಡ್ಕ | ಗುಂಡಿ ಬಿದ್ದು ಕೆಸರು ಗದ್ದೆಯಂತಾದ ರಾಷ್ಟ್ರೀಯ ಹೆದ್ದಾರಿ: ವಾಹನ ಸವಾರರ ಪರದಾಟ
ಬಂಟ್ವಾಳ: ಕಲ್ಲಡ್ಕದ ರಸ್ತೆ ಗದ್ದೆಯಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ಸಂಚಾರಕ್ಕೆ ಬದಲಿ ತಾತ್ಕಾಲಿಕ ವಾಗಿ ಸರ್ವೀಸ್ ರಸ್ತೆಗೆ ಹಾಕಿದ ಡಾಮರು ಕಿತ್ತುಹೋಗಿದೆ.
ಸಂಚಾರಕ್ಕೆ ಸಾಧ್ಯವೇ ಇಲ್ಲ ಎಂಬ ಸ್ಥಿತಿ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ಮಧ್ಯೆ ಬಿಸಿರೋಡಿನಿಂದ ಅಡ್ಡಹೊಳೆವರೆಗೆ ಚತುಷ್ಪತ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕೆ.ಎನ್‌ಆರ್.ಸಿ.ಕಂಪೆನಿ ಗುತ್ತಿಗೆ ವಹಿಸಿಕೊಂಡಿದೆ. ಕಲಡ್ಕದ ನರಿಹರಿ ಪರ್ವತದ ದ್ವಾರದ ಸ್ವಲ್ಲ ಮುಂದೆಯಿಂದ ಕರಿಂಗಾನ ಕ್ರಾಸ್ ಇವೆರಡರ ಮಧ್ಯೆಯಿಂದ ಕುದ್ರೆಬೆಟ್ಟು ವರೆಗೆ ಪ್ಲೈ ಓವರ್ ಕಾಮಗಾರಿ ನಡೆಯುತ್ತಿದೆ.
ಪ್ಲೈ ಓವರ್ ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದು ಎಂಬ ನಿಟ್ಟಿನಲ್ಲಿ ಎರಡು ಬದಿಯಲ್ಲಿ ಸರ್ವೀಸ್ ರಸ್ತೆಯ ನಿರ್ಮಾಣ ಮಾಡಲಾಗಿದೆ.
ಪ್ಲೈ ಓವರ್ ಕಾಮಗಾರಿಯ ಸಂದರ್ಭ ಸರಯಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣ ಅಸಾಧ್ಯ ಎಂಬ ನಿಟ್ಟಿನಲ್ಲಿ ಕಂಪೆನಿ ಸರ್ವೀಸ್ ರಸ್ತೆಗೆ ಕಳಪೆ ಗುಣಮಟ್ಟದ ಡಾಮರುಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಬಾರಿ ಕೂಡ ತಾತ್ಕಾಲಿಕವಾಗಿ ಡಾಮರು ಹಾಕಿದ ಕಂಪೆನಿ ಬಳಿಕ ಮಳೆಗಾಲದಲ್ಲಿ ಉಂಟಾದ ಗುಂಡಿಯನ್ನು ಮುಚ್ಚಲು ಅಸಾಧ್ಯ ಪರಿಸ್ಥಿತಿಯಲ್ಲಿ ಒದ್ದಾಡಿತ್ತು.
ಇದೀಗ ಮತ್ತೆ ಅದೇ ಮಾದರಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಮಾಯವಾಗಿ ಗದ್ದೆಯಾಗಿದೆ. ವಾಹನಗಳು ಗುಂಡಿಗೆ ಬಿದ್ದು ಮತ್ತೆ ನೇರವಾಗಿ ಗ್ಯಾರೇಜ್ ಗೆ ಹೋಗಬೇಕು ಎಂಬುದು ವಾಹನಸವಾರರ ಆರೋಪವಾಗಿದೆ.




