March 13, 2026

ಕಾರ್ಕಳ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಓರ್ವ ಆಸ್ಪತ್ರೆಗೆ ದಾಖಲು

0
20230701_205950.jpg

ಕಾರ್ಕಳ: ಕುದುರೆ ಮುಖದಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿರುವ ಘಟನೆ ಎಸ್ ಕೆ ಬಾರ್ಡರ್ ಬಳಿಯಲ್ಲಿ ಸಂಭವಿಸಿದೆ.

ಜೂನ್ 30 ರಂದು ರಾತ್ರಿ ವೇಳೆಗೆ ಸಂಭವಿಸಿದ ಈ ಘಟನೆಯಲ್ಲಿ ಮಂಗಳೂರಿನ ತಲಪಾಡಿಯ ಮಜೀಪ ಮೊಹಮ್ಮದ್( 21) ಗಾಯಗೊಂಡಿದ್ದು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿ ಸಿಕ್ಕಿದ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಕಾರ್ಕಳದಿಂದ 108 ಅಂಬುಲೆನ್ಸ್ ಸಿಬ್ಬಂದಿಗಳು ತೆರಳಿ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ತಾಲೂಕು ಸರಕಾರಿ ಆಸ್ಪತ್ರೆಗೆ‌ ಕರೆದೊಯ್ಯಿದ್ದಾರೆ.

108 ಅಂಬುಲೆನ್ಸ್ ನ ಪೈಲೆಟ್ ಪುಂಡಲೀಕ್ ಇಎಂಟಿ ದೇವಕಿ ಕರ್ತವ್ಯ ನಿಷ್ಠೆ ತೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!