ಕಡಬ: ಬೃಹತ್ ಗಾತ್ರದ ಕಾಡುಕೋಣದ ಮೃತದೇಹ ನದಿಯಲ್ಲಿ ಪತ್ತೆ
ಕಡಬ: ಕಡಬ ಸಮೀಪದ ಕೋಡಿಂಬಾಳದ ಪುಳಿಕುಕ್ಕು ಎಂಬಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತದೇಹವು ಕಂಡುಬಂದಿದೆ.
ಪುಳಿಕುಕ್ಕು ಸೇತುವೆಯ ಬಳಿ ನದಿಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಕಾಡುಕೋಣದ ಮೃತದೇಹವು ಕಂಡುಬಂದಿದೆ.
ಇನ್ನು ವಿದ್ಯುತ್ ಆಘಾತದಿಂದ ಅಥವಾ ಯಾರಾದರೂ ಗುಂಡು ಹೊಡೆದಿದ್ದರಿಂದ ಕಾಡುಕೋಣ ಸತ್ತಿರಬಹುದೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.





