ಮದುವೆ ಮನೆಗೆ ಅತಿಥಿಗಳನ್ನು ಹೊತ್ತು ಸಾಗುತ್ತಿದ್ದಾಗ ನದಿಗೆ ಉರುಳಿದ ಟ್ರಕ್: ಮೂವರು ಮಕ್ಕಳು ಸೇರಿ ಐವರು ಸಾವು
ಭೋಪಾಲ್: ಮದುವೆ ಮನೆಗೆ ಅತಿಥಿಗಳನ್ನು ಹೊತ್ತು ಸಾಗುತ್ತಿದ್ದ ಟ್ರಕ್ ಒಂದು ನದಿಗೆ ಉರುಳಿದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ದಾರುಣವಾಗಿ ಮೃತಪಟ್ಟ ಘಟನೆ ಮಧ್ರಪ್ರದೇಶ ದ ದಾಟಿಯಾ ಜಿಲ್ಲೆಯಲ್ಲಿ ನಡೆದಿದೆ.
ಮೃತರೆಲ್ಲರೂ ಗ್ವಾಲಿಯರ್‍ನ ಬಿಲ್ಹೆಟಿ ಗ್ರಾಮದವರಾಗಿದ್ದು, ಇವರೆಲ್ಲರೂ ಟಿಕಮ್ಗರ್ ನಲ್ಲಿ ನಡೆಯುತ್ತಿದ್ದ ಮಗಳ ಮದುವೆಗೆ ತೆರಳುತ್ತಿದ್ದರು. ಘಟನೆಯಲ್ಲಿ ಸುಮರು 24 ಮಂದಿ ಗಾಯಗೊಂಡಿದ್ದು, ಹಲವು ಮಕ್ಕಳು ನಾಪತ್ತೆಯಾಗಿದ್ದಾರೆ ಎಂಬುದಾಗಿ ವರದಿಯಗಿದೆ.




