March 24, 2026

ತನ್ನ 15 ಎಕರೆ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುವುದಾಗಿ ಘೋಷಿಸಿದ 100ರ ವೃದ್ಧೆ

0
IMG-20230627-WA0028.jpg

ಭೋಪಾಲ್: ತನ್ನ ಸುಮಾರು 15 ಎಕರೆ ಭೂಮಿಯನ್ನು ಪ್ರಧಾನಿ ನರೇಂದ್ರ ಮೋದಿ ಹೆಸರಿಗೆ ಬರೆದುಕೊಡುವುದಾಗಿ 100 ವರ್ಷದ ವೃದ್ಧೆಯೊಬ್ಬರು ಘೋಷಣೆ ಮಾಡಿದ್ದಾರೆ.

ಅಜ್ಜಿಯನ್ನು ಮಂಗಿ ಬಾಯ್ ತನ್ವಾರ್ ಎಂದು ಗುರುತಿಸಲಾಗಿದೆ.

ಇನ್ನು ಮಂಗಿ ಬಾಯ್ ತನ್ವಾರ್ ಅವರು ರಾಜ್‍ಘರ್ ಜಿಲ್ಲೆಯಿಂದ 65 ಕಿ.ಮೀ ದೂರದಲ್ಲಿರುವ ಜಾಗಿರ್ ಗ್ರಾಮದ ಹರಿಪುರ ನಿವಾಸಿಯಾಗಿದ್ದು, ಸದ್ಯ ಅಜ್ಜಿ ಘೋಷಣೆ ಮಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಂಗಿ ಬಾಯ್‍ಗೆ 14 ಮಂದಿ ಮಕ್ಕಳಿದ್ದು, ಈ ಮಧ್ಯೆ ಮೋದಿ ಕೂಡ ನನ್ನ ಮಗನಂತೆಯೇ. ಹೀಗಾಗಿ ನನ್ನ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!