May 11, 2026

ಮನೆಯಲ್ಲೇ ಗಾಂಜಾ ಬೆಳೆದ ವಿದ್ಯಾರ್ಥಿಗಳು: ಫಾರ್ಮಿಂಗ್ ನೋಡಿ ದಂಗಾದ ಪೊಲೀಸರು

0
IMG-20230624-WA0032.jpg

ಶಿವಮೊಗ್ಗ: ತಮಿಳುನಾಡು, ಕೇರಳದ ಮೂವರು ಮೆಡಿಕಲ್ ವಿದ್ಯಾರ್ಥಿಗಳು ಮನೆಯಲ್ಲೇ ಗಾಂಜಾ ಬೆಳೆದು ಪೊಲೀಸರನ್ನೇ ಅಚ್ಚರಿಗೊಳಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ತಮಿಳುನಾಡು ಕೃಷ್ಣಗಿರಿಯ ವಿಘ್ನರಾಜ್ (28) ಎಂಬಾತ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದು ಶಿವಗಂಗಾ ಲೇಔಟ್‌ನಲ್ಲಿ ಮನೆ ಮಾಡಿಕೊಂಡಿದ್ದ. ಇಲ್ಲಿ ಮನೆ ಮಾಲಕರ ಗಮನಕ್ಕೆ ಬಾರದಂತೆ ಮನೆಯೊಳಗೆ ಕೃತಕ ವಾತಾವರಣ ಸೃಷ್ಟಿಸಿ ಪಾಟ್‌ಗಳಲ್ಲಿ ಗಾಂಜಾ ಬೆಳೆದು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾಗ ತಿಳಿದುಬಂದಿದೆ.

ಇನ್ನು ಮೂರುವರೆ ವರ್ಷದಿಂದ ಈ ದಂದೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ಇದರಲ್ಲಿ ಯರ‍್ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಲಾಗುತ್ತಿದೆ.

ಕೇರಳ ಇಡುಕ್ಕಿಯ ವಿನೋದ್ ಕುಮಾರ್ (27), ತಮಿಳುನಾಡು ಧರ್ಮಪುರಿಯ ಪಾಂಡಿದೊರೈ (27) ಎಂಬುವರು ಗಾಂಜಾ ಖರೀದಿಗೆ ಬಂದಿದ್ದು ಅವರನ್ನು ಕೂಡ ಬಂಧಿಸಲಾಗಿದ್ದು, ಈತ ಒಟ್ಟು ಆರು ಲಕ್ಷ ರೂ. ಗಾಂಜಾ ಬೆಳೆಯಲು ವಿನಿಯೋಗಿಸಿದ್ದ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!