ವಿಟ್ಲ: ಹೊರೈಝನ್ ಶಾಲೆ, ಪ್ರತಿಭಾ ಪುರಸ್ಕಾರ ಮತ್ತು ಪೋಷಕರ ಸಮಾವೇಶ: ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಭಾಗಿ
ವಿಟ್ಲ: ಶಾಲೆಯೊಂದನ್ನು ತೆರೆದು ಆ ಮೂಲಕ ಸತ್ಪ್ರಜೆಗಳನ್ನು ರೂಪಿಸಿ ಸಮಾಜಕ್ಕೆ ಅರ್ಪಿಸುವುದು ಕೂಡ ದೇಶಸೇವೆ ಮಾಡಿದಂತೆ. ಶಾಸರು, ಜನಪ್ರತಿನಿಧಿಗಳು ಬಲಿಷ್ಠರಾದಾಗ, ದೇಶ ಬಲಿಷ್ಠವಾಗುತ್ತದೆ. ಮಕ್ಕಳ ಯಶಸ್ವಿಗೆ ಹೆತ್ತವರ ಶ್ರಮ ಶಿಕ್ಷಕರ ಮಾರ್ಗದರ್ಶನ ಅಗತ್ಯವಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.


ಅವರು ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಪ್ರತಿಭಾ ಪುರಸ್ಕಾರ ಹಾಗೂ ಪೋಷಕರ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಮಸ್ಯೆಗಳ ಕಾರಣದಿಂದ ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸಬಾರದು. ಶಿಕ್ಷಣಕ್ಕೆ ಗಮನಕೊಡಬೇಕು. ಮಕ್ಕಳ ಮೇಲೆ ವಿಶ್ವಾಸ ಇಡಬೇಕು ಹೆತ್ತವರು ವಿಶ್ವಾಸ ಇಟ್ಟಾಗ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷ ಝುಬೈರ್ ಮಾಸ್ಟರ್ ವಹಿಸಿದ್ದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಮಾತನಾಡಿ ಪ್ರತಿಯೊಬ್ಬರು ಶಿಕ್ಷಣ ಪಡೆದರೆ ಅದೇ ಸಮಾಜದ ಆಸ್ತಿ. ಅವರನ್ನು ಬೆಳೆಸುವುದು ಇಳಿಸುವ ಜವಾಬ್ದಾರಿ ಹೆತ್ತರವ ಮೇಲಿದೆ ಎಂದು ಹೇಳಿದರು.
ಪ್ರಸ್ತಾವನೆ ಮಾಡಿದ ಕಾರ್ಯದರ್ಶಿ ನೋಟರಿ ಅಬೂಬಕರ್ ವಿಟ್ಲ ಪ್ರಸ್ತಾವನೆ ಮಾಡಿದರು. ಮುಖ್ಯೋಪಾಧ್ಯಾಯರಾದ ಮನಾಝಿರ್ ಮುಡಿಪು ವರದಿ ವಾಚಿಸಿದರು. ಶಾಲಾ ಸಂಚಾಲಕ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ವಿದ್ಯಾರ್ಥಿಗಳ ಮತ್ತು ಹೆತ್ತವರ ಜವಾಬ್ದಾರಿ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಕಳೆದ ವರ್ಷ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿ ತೌಫೀಕ ಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಯು.ಟಿ.ಖಾದರ್ ಹಾಗೂ ಅಶೋಕ್ ರೈ ಯವರನ್ನು ಸನ್ಮಾನಿಸಲಾಯಿತು.
ಮೇಲ್ವಿಚಾರಕ ಗಫೂರ್ ಪೊನ್ನೋಟು, ಕೋಶಾಧಿಕಾರಿ ಅಂದುಞಿ ಗಮಿ, ಗೌರವ ಸಲಹೆಗಾರ ವಿ.ಎಚ್ ಅಶ್ರಫ್, ಇಕ್ಬಾಲ್ ಮೇಗಿನಪೇಟೆ,ಅಝೀಝ್ ಸನ,ಅಬ್ದುಲ್ ರಹಿಮಾನ್ ದೀಪಕ್,ಇಕ್ಬಾಲ್ ಹಳೆಮನೆ, ಹನೀಫ್ ಎಂ.ಎ, ಸದರ್ ಉಮ್ಮರ್ ಸಅದಿ,ಮಸೀದಿ ಕಾರ್ಯದರ್ಶಿ ಹಮೀದ್ ಬದ್ರಿಯಾ,ಕೋಶಾಧಿಕಾರಿ ಶರೀಫ್ ಪೊನ್ನೋಟು, ಅಬೂಬಕರ್ ಅನಿಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್ ಸ್ವಾಗತಿಸಿದರು.
ಲುಕ್ಮಾನ್ ವಂದಿಸಿದರು. ಶಿಕ್ಷಕಿ ಗಾಯತ್ರಿ ಹಾಗೂ ರಾಹಿಸ್ತಾ ಬೇಗಂ ನಿರೂಪಿಸಿದರು.





