December 15, 2025

ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಬಿಷಪ್ ಆಧಿಕೃತ ಭೇಟಿ

0
IMG-20230624-WA0042.jpg

ಪುತ್ತೂರು: ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗು ಕಥೋಲಿಕ್ ವಿದ್ಯಾಸಂಸ್ಥೆಗಳ ಆಧ್ಯಕ್ಷರಾದ ಪರಮ ಪೂಜ್ಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ರವರು ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ಹಾಗು ಮಾಯ್ ದೆ ದೇವುಸ್ ಶಿಕ್ಶಣ ಸಂಸ್ಥೆಗಳಿಗೆ ಜೂನ್ ೨೪ ಶನಿವಾರ ರಂದು ತಮ್ಮ ಆಧಿಕೃತ ಭೇಟಿಯನ್ನು ನೀಡಿದರು.

ಬೆಳಿಗ್ಗೆ 9 ಗಂಟೆಗೆ ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ಇಲ್ಲಿ ಆಗಮಿಸಿ ಪ್ರಾರ್ಥನ ವಿದಿಗಳನ್ನು ನೆರವೇರಿಸಿ ತದನಂತರ ಮಾಯ್ ದೆ ದೇವುಸ್ ಶಿಕ್ಶಣ ಸಂಸ್ಥೆಗಳಿಗೆ ಬೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಶಿಕ್ಶಕರೊಂದಿಗೆ ಸಂವಾದ ನಡೆಸಿದರು.

ಮೌಲ್ಯಭರಿತ ಜೀವನ ಮನುಷ್ಯನಿಗೆ ಬಹುಮುಖ್ಯ. ಕೇವಲ ಜ್ನಾನ ಸಂಪಾದನೆ ಮಾತ್ರ ಶಿಕ್ಶಣದ ಗುರಿಯಲ್ಲ ಬದಲಾಗಿ ಜೀವನದ ಮೌಲ್ಯಗಳ ಸಂಪಾದನೆ ಬಹು ಮುಖ್ಯ. ಸಂಸ್ಕಾರ, ಪ್ರೀತಿ, ಕರುಣೆ, ಗೌರವ, ಆದ್ಯಾತ್ಮಕತೆಯ ಮೌಲ್ಯಗಳನ್ನು ನೀಡುವ ಶಿಕ್ಶಣ ಒಂದು ಪರಿಪೂರ್ಣ ಶಿಕ್ಶಣ. ಬದಲಾಗುವ ಈ ಜಗತ್ತಿನಲ್ಲಿ ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸನ್ನು ಸಾಧಿಸುವ ಪ್ರಜೆಗಳಾಗಿ ಬಾಳೋಣ ಎಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು.

ಶಿಕ್ಶಣ ನೀಡುವುದು ಕೇವಲ ಒಂದು ಕೆಲಸವಲ್ಲ ಬದಲಾಗಿ ಜೀವನ ರೂಪಿಸುವ ಜವಬ್ದಾರಿ. ಶಿಕ್ಶಕರ ಜವಬ್ದಾರಿ ಕೇವಲ ಜ್ನಾನವನ್ನು ನೀಡುವುದಲ್ಲ ಬದಲಾಗಿ ವಿದ್ಯಾರ್ಥಿಗಳನ್ನು ಒಳ್ಳೆಯ ಮನುಶ್ಯರನ್ನಾಗಿ ರೂಪಿಸುವುದು. ನಿಮ್ಮ ಜೀವನ ಶೈಲಿಯ ಮುಖಾಂತರ ವಿದ್ಯಾರ್ಥಿಗಳಿಗೆ ಪ್ರೆರಣೆಯಾಗಿ ಎಂದು ಕರೆಯಿತ್ತರು.

ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿರುವ ಸಂತ ವಿಕ್ಟರ್ ಬಾಲಿಕಾ ಪ್ರೌಡ ಶಾಲೆ, ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆ, ಸಂತ ವಿಕ್ಟರ್ ಆಂಗ್ಲಮಾದ್ಯಮ ಶಾಲೆ ಹಾಗು ಸಂತ ಫಿಲೋಮಿನಾ ಕ್ಯಾಂಪಸ್‌ನಲ್ಲಿರುವ ಸಂತ ಫಿಲೋಮಿನಾ ಆಂಗ್ಲ ಮಾದ್ಯಮ ಶಾಲೆ, ಸಂತ ಫಿಲೋಮಿನಾ ಪ್ರೌಡ ಶಾಲೆ, ಸಂತ ಫಿಲೋಮಿನಾ ಪಿ.ಯು ಕಾಲೇಜು, ಸಂತ ಫಿಲೋಮಿನಾ ಕಾಲೇಜಿಗೆ ಬೇಟಿ ನೀಡಿ ವಿದ್ಯಾರ್ಥಿ ಅನಿ ಶಿಕ್ಶಕರೊಂದಿಗೆ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಸಂತ ಫಿಲೋಮಿನಾ ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿ ನಿಲಯಗಳಿಗೆ ಬೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಈ ಆದಿಕ್ರತ ಬೇಟಿಯ ಸಂಧರ್ಬದಲ್ಲಿ ಮಾಯ್ ದೆ ದೇವುಸ್ ಚರ್ಚಿನ ಪ್ರದಾನ ಧರ್ಮಗುರುಗಳು ಹಾಗು ಮಾಯ್ ದೆ ದೇವುಸ್ ಶಿಕ್ಶಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರುಳಾದ ವಂದನೀಯ ಆಜಯ್ ಲೋಹಿತ್ ಮಸ್ಕರೇನ್ಹಸ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಶರಾದ ಶ್ರೀ ಜೆರಾಲ್ಡ್ ಡಿಕೋಸ್ತಾ, ಕಾರ್ಯದರ್ಶಿಗಳಾದ ಶ್ರೀಮತಿ ಎವ್ಲಿನ್ ಹಾಗು ಚರ್ಚ್ ಪಾಲನ ಮಂಡಳಿಯ ಸರ್ವ ಸದಸ್ಯರು ಹಾಗು ಭಕ್ತಾಧಿಗಳು ಉಪಸ್ಥಿತರಿದ್ದರು. ಶಿಕ್ಶಣ ಸಂಸ್ಥೆಗಳ ಬೇಟಿಯ ಸಂಧರ್ಭದಲ್ಲಿ ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಮಖ್ಯ ಶಿಕ್ಶಕರಾದ ಶ್ರೀಮತಿ ಜಾನೆಟ್ ಡಿಸೋಜ. ಸಂತ ವಿಕ್ಟರ್ ಆಂಗ್ಲಮಾದ್ಯಮ ಶಾಲೆಯ ಮಖ್ಯ ಶಿಕ್ಶಕರಾದ ಶ್ರೀ ಹ್ಯಾರಿ ಡಿಸೋಜ, ಸಂತ ವಿಕ್ಟರ್ ಬಾಲಿಕಾ ಪ್ರೌಡ ಶಾಲೆಯ ಮಖ್ಯ ಶಿಕ್ಶಕರಾದ ಶ್ರೀಮತಿ ರೋಸ್‌ಲಿನ್ ಲೋಬೊ, ಸಂತ ಫಿಲೋಮಿನಾ ಆಂಗ್ಲ ಮಾದ್ಯಮ ಶಾಲೆಯ ಮಖ್ಯ ಶಿಕ್ಶಕರಾದ ಸಿ| ಲೋರಾ ಪಾಯಸ್, ಸಂತ ಫಿಲೋಮಿನಾ ಪ್ರೌಡ ಶಾಲೆಯ ಮಖ್ಯ ಶಿಕ್ಶಕರಾದ ವಂದನೀಯ ಮಾಕ್ಸಿಮ್ ಡಿಸೋಜ, ಸಂತ ಫಿಲೋಮಿನಾ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಆಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಆಂಟನಿ ಪ್ರಕಾಶ್ ಮೊಂತೆರೊ, ಸಂತ ಫಿಲೋಮಿನಾ ವಿದ್ಯಾರ್ಥಿ ನಿಲಯದ ವಾರ್ಡನ್ ವಂದನೀಯ ರೂಪೇಶ್ ತಾವ್ರೊ, ಸಂತ ಫಿಲೋಮಿನಾ ವಿದ್ಯಾರ್ಥಿನಿ ನಿಲಯದ ವಾರ್ಡನ್ ಸಿ| ಲೂರ್‍ದ್ ಮೇರಿ ಹಾಗು ಸಂತ ಪಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂದನೀಯ ಸ್ಟ್ಯಾನಿ ಪಿಂಟೊ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!