ಪತಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸರ: ಫೇಸ್ ಬುಕ್ ಲೈವ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಹೈದರಾಬಾದ್: ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಫೇಸ್ ಬುಕ್ ಲೈವ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೈದರಾಬಾದ್ ಮೂಲದ ಸನಾ( 32) ಮೃತ ಮಹಿಳೆ. ಕಳೆದ 5 ವರ್ಷಗಳ ಹಿಂದೆ ಸನಾ ತನ್ನ ಶಾಲಾ ಸಹಪಾಠಿಯಾಗಿದ್ದ ಹೇಮಂತ್ ಎನ್ನುವವರನ್ನು ವಿವಾಹವಾಗಿದ್ದರು.
ಆ ಸಮಯದಲ್ಲಿ ಹೇಮಂತ್ ನಿರುದ್ಯೋಗಿಯಾಗಿದ್ದರು. ಸನಾ ಆಗ ದೆಹಲಿಯ ಏರ್‌ಲೈನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಹೇಮಂತ್ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದರು. ಇದೇ ಕಾರಣದಿಂದ ಬೇಸತ್ತು ಹೋಗಿದ್ದ ಸನಾ ಫೇಸ್ ಬುಕ್ ಲೈವ್ ನಲ್ಲೇ ಸನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಅವರು ಗಂಡನ ವಿರುದ್ಧ ಕಿರುಕುಳದ ಆರೋಪವನ್ನು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.




