March 24, 2026

ವಿಮಾನ ನಿಲ್ದಾಣದಲ್ಲಿ 6,850 ಜೀವಂತ ಆಮೆಗಳನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

0
image_editor_output_image-1837208760-1687584848322.jpg

ತಿರುಚಿರಾಪಳ್ಳಿ: ತಮಿಳುನಾಡಿನ ಕಸ್ಟಮ್ ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಅಧಿಕಾರಿಗಳು ಶುಕ್ರವಾರ 6,850 ಜೀವಂತ ಕೆಂಪು ಇಯರ್ಡ್ ಸ್ಲೈಡರ್‌ಗಳು, ಒಂದು ಜಾತಿಯ ಆಮೆಯನ್ನು ವಶಪಡಿಸಿಕೊಂಡಿದ್ದಾರೆ.

ಇದರ ಜತೆಗೆ ಕೌಲಾಲಂಪುರದಿಂದ ತಮಿಳುನಾಡಿನ ತಿರುಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಪ್ತಚರದ ಮಾಹಿತಿಯ ಮೇರೆಗೆ, ತಿರುಚ್ಚಿಯ AIU ಅಧಿಕಾರಿಗಳು ವಿಮಾನ ನಿಲ್ದಾಣದ ನಿರ್ಗಮನ ಗೇಟ್‌ನಲ್ಲಿ ಇಬ್ಬರು ಪ್ರಯಾಣಿಕರನ್ನು ತಡೆದಿದ್ದಾರೆ.

ಅವರ ಚೆಕ್-ಇನ್ ಲಗೇಜ್‌ಗಳನ್ನು ಪರಿಶೀಲಿಸಿದಾಗ ಪ್ರಯಾಣಿಕರ ಸ್ಟ್ರಾಲರ್ ಬ್ಯಾಗ್‌ನೊಳಗೆ ಸಣ್ಣ ಪೆಟ್ಟಿಗೆಗಳಲ್ಲಿ ಸಣ್ಣ ಗಾತ್ರದ ಜೀವಂತ ಆಮೆಗಳನ್ನು ಇರುವುದನ್ನು ಪತ್ತೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!