March 24, 2026

ಮಂಗಳೂರು: ಗುರುಪುರದ ರಸ್ತೆ ಅಪಘಾತದಲ್ಲಿ ಸವಾರ ಮೃತಪಟ್ಟ ಪ್ರಕರಣ: ಬಸ್‌ ತಡೆದು ಸ್ಥಳೀಯರ ಪ್ರತಿಭಟನೆ

0
IMG-20230623-WA0044.jpg


 
ಮಂಗಳೂರು: ಜೂ.22ರಂದು ಗುರುಪುರ ಜಂಕ್ಷನ್ ಬಳಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆಯನ್ನು ಖಂಡಿಸಿ ಇಂದು ಬಸ್‌ಗಳನ್ನು ತಡೆದು ಸ್ಥಳೀಯರು ಕೈಕಂಬ ಜಂಕ್ಷನ್‌‌ನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ಢಿಕ್ಕಿಯಾಗಿ ಬೈಕ್ ಸವಾರ ಪೊಳಲಿ ಕರಿಯಂಗಳ ನಿವಾಸಿ ಸಂತೋಷ್ ಕುಮಾರ್ ಅವರು ಅಪಘಾತದಲ್ಲಿ ಮೃತಪಟ್ಟಿದ್ದರು.

ಇನ್ನು ಪ್ರತಿಭಟನೆಯಿಂದಾಗಿ ಕೈಕಂಬ ಜಂಕ್ಷನ್ ಸಂಪೂರ್ಣ ಬ್ಲಾಕ್ ಆಗಿದ್ದು, ಮಳೆಯ ನಡುವೆಯೂ ನೂರಾರು ಮಂದಿ ಸೇರಿ ವ್ಯವಸ್ಥೆಯ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಸ್ಥಳಕ್ಕೆ ಬಜಪೆ ಠಾಣಾ ಪೊಲೀಸರು ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತು ಕತೆ ನಡೆಸುತ್ತಿದ್ದಾರೆ.

ಬಸ್ ಗಳನ್ನು ಸ್ಥಳದಿಂದ ತೆರಳಲು ಬಿಡದ ಹಿನ್ನೆಲೆಯಲ್ಲಿ ಮೂಡುಬಿದಿರೆ- ಮಂಗಳೂರು, ಬಜಪೆ, ಪೊಳಲಿ ಬಿಸಿರೋಡ್ ಮೊದಲಾದೆಡೆಗೆ ತೆರಳುವ ಪಯಾಣಿಕರು ಬಸ್ ನಲ್ಲೇ ಬಾಕಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!