July 2, 2026

ಶಿವಮೊಗ್ಗ: ತುಂಗಾ ನದಿಗೆ ಈಜಲು ತೆರೆಳಿದ್ದ ಕಾರ್ಕಳದ ನಿಟ್ಟೆ ಕಾಲೇಜಿನ ಇಬ್ಬರು ಉಪನ್ಯಾಸಕರು ನೀರು ಪಾಲು

0
IMG-20230618-WA0031.jpg

ಶಿವಮೊಗ್ಗ: ತೀರ್ಥಹಳ್ಳಿಯ ತೀರ್ಥಮತ್ತೂರು ಗ್ರಾಮದಲ್ಲಿರುವ ತುಂಗಾ ನದಿಗೆ ಇಳಿದಿದ್ದ ಕಾರ್ಕಳದ ನಿಟ್ಟೆ ಕಾಲೇಜಿನ ಇಬ್ಬರು ಉಪನ್ಯಾಸಕರು ನೀರುಪಾಲಾಗಿರುವ ಘಟನೆ ನಡೆದಿದೆ.

ಪುನೀತ್ (38 ) ಮತ್ತು ಬಾಲಾಜಿ (36 ) ಮೃತಪಟ್ಟ ಉಪನ್ಯಾಸಕರು.

ಉಪನ್ಯಾಸಕರಾದ ಪುನೀತ್, ಬಾಲಾಜಿ ತೀರ್ಥಮತ್ತೂರು ಗ್ರಾಮಕ್ಕೆ ಬಂದಿದ್ದು,. ತೀರ್ಥಮತ್ತೂರು ಮಠದ ಬಳಿಯ ಹೋಮ್ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ಅವರು ಇಂದು ಈಜಾಡಲು ತುಂಗಾ ನದಿಗೆ ಇಳಿದ್ದರು. ನೀರಿನ ಸೆಳೆತಕ್ಕೆ ಸಿಲುಕಿದ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ.

ಇನ್ನು ಉಪನ್ಯಾಸಕರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದರು. ತೀರ್ಥಹಳ್ಳಿಯ ತೀರ್ಥಮತ್ತೂರು ಮಠದ ಸಮೀಪ ಇರುವ ಹೋಂ ಸ್ಟೇಯಲ್ಲಿ ತಂಗಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!