March 24, 2026

ಕಾರ್ಕಳ: ಬಸ್-ಬೈಕ್ ನಡುವೆ ಅಪಘಾತ: ಸವಾರ ಮೃತ್ಯು, ಸಹಸವಾರೆ ಗಂಭೀರ

0
IMG-20230618-WA0032.jpg

ಕಾರ್ಕಳ: ಹೆಬ್ರಿ ಆಗುಂಬೆ ಘಾಟ್ ಬಸ್ ಮತ್ತು ಬೈಕ್ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲಿ ದಾರುಣ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಮೃತಪಟ್ಟ ಯುವಕನನ್ನು ಬಾರ್ಕೂರು ನಿವಾಸಿ ಸಶಾಂಕ್ (21) ಎಂದು ಗುರುತಿಸಲಾಗಿದೆ.

ಬೈಕ್‌ ನ ಸಹಸವಾರಿಯಾಗಿದ್ದ ನಿರ್ಮಿತ(19) ಅವರ ಸ್ಥಿತಿ ಗಂಭೀರವಾಗಿದೆ. ಆಕೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆ ದಾಖಲಿಸಲಾಗಿದೆ.

ಮಾಹಿತಿ ತಿಳಿದ 108 ಹೆಬ್ರಿ ಅಂಬುಲೆನ್ಸ್ ಗಳೆರಡು ಘಟನಾ ಸ್ಥಳಕ್ಕೆ ಅಗಮಿಸಿದೆ. ಗಾಯಾಳು ನಿರ್ಮಿತಳಿಗೆ ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು.

108 ಅಂಬುಲೆನ್ಸ್ ನ ಅಮರನಾಥ್ ಇ ಎಂ ಟಿ ಮಹಾಂತೇಶ್ ಕರ್ತವ್ಯ ಹಾಗೂ ಮತ್ತೊಂದು 108 ಅಂಬುಲೆನ್ಸ್ ನ ಪೈಲೆಟ್ ಕಿಶೋರ್ ಇ ಎಂ ಟಿ ದೇವಿಕಾ ಕರ್ತತ್ಯ ನಿಷ್ಠೆ ತೋರಿದ್ದಾರೆ.‌

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!