August 25, 2026

ಮಂಗಳೂರು: ಚಿನ್ನಾಭರಣ, ಮೊಬೈಲ್ ಫೋನ್ ಸುಲಿಗೆ ಪ್ರಕರಣ: ಬಾಲಾಪರಾಧಿ ಸೇರಿದಂತೆ ಇಬ್ಬರು ಪೊಲೀಸರ ವಶಕ್ಕೆ

0
IMG-20230617-WA0034.jpg

ಮಂಗಳೂರು: ಚಿನ್ನಾಭರಣ ಮತ್ತು ಮೊಬೈಲ್ ಫೋನ್ ಅನ್ನು ಯುವಕನೋರ್ವನಿಂದ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಬಾಲಾಪರಾಧಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರು ಬೆಂಗ್ರೆ ನಿವಾಸಿ ನಿಹಾಲ್ ವೈ ಸುವರ್ಣ (19) ಮತ್ತು ಅಪ್ರಾಪ್ತ ವಯಸ್ಕ ಬಾಲಕನನ್ನು ಬಂಧಿಸಿದ್ದಾರೆ.

ದೂರಿನ ಪ್ರಕಾರ ನಿಹಾಲ್ ಮತ್ತು ಸುಲಿಗೆಗೆ ಒಳಗಾದ ಯುವಕ ಪರಸ್ಪರ ಪರಿಚಿತರಾಗಿದ್ದು, ಜೂನ್ 16 ರಂದು ಆರೋಪಿಗಳು ಸಂತ್ರಸ್ತನನ್ನು ಬೈಕಂಪಾಡಿ ಬಳಿಯ ರೈಲ್ವೆ ಹಳಿ ಬಳಿ ಕರೆದಿದ್ದರು. ಕಣ್ಣಿಗೆ ಮೆಣಸಿನ ಪುಡಿ ಎಸೆದು ಮೊಬೈಲ್ ಫೋನ್ ಮತ್ತು ಚಿನ್ನದ ಸರವನ್ನು ದೋಚಿದ್ದರು.

ಇನ್ನು 5.79 ಗ್ರಾಂ ತೂಕದ ಚಿನ್ನದ ಸರ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!