May 12, 2026

ಬಂಟ್ವಾಳ: ಪ್ರತಿಭಾವಂತ ವಿದ್ಯಾರ್ಥಿ ಅಸೌಖ್ಯದಿಂದ ಮೃತ್ಯು

0
IMG-20230617-WA0028.jpg

ಬಂಟ್ವಾಳ; ಪ್ರತಿಭಾವಂತ ವಿದ್ಯಾರ್ಥಿಯೋರ್ವ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಎಂಬಲ್ಲಿ ನಡೆದಿದೆ.

ನರಿಕೊಂಬು ನಾಟಿ ನಿವಾಸಿ ಹಿರಿಯ ವಕೀಲರಾದ ಶ್ರೀನಿವಾಸ ದೈಪಲ ಪುತ್ರ ಶಿಶೀರ್ ಅನಾರೋಗ್ಯದಿಂದ ಬಳಲುತ್ತಿದ್ದು, ಜೂನ್ 16 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಶಿಶೀರ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಕೀರ್ತನಾ ಸಂಗೀತ ಶಾಲೆಯ ಪ್ರತಿಭೆಯಾಗಿದ್ದ.

ಕಳೆದ ವರ್ಷ ಶಿಶೀರ್ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಶಾಲೆಯಲ್ಲಿರುವಾಗಲೇ ಈತ ಕುಸಿದು ಬಿದ್ದಿದ್ದ. ಆ ಬಳಿಕ ಈತನನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದಾಗ ಬ್ರೈನ್ ಸಂಬಂಧಿಸಿದ ಕಾಯಿಲೆಯ ಬೆಳಕಿಗೆ ಬಂದಿತ್ತು. ಅಂದಿನಿಂದಲೇ ಕಾಯಿಲೆಗೆ ಚಿಕಿತ್ಸೆ ನಡೆಯುತ್ತಿತ್ತು. ಈ ಮಧ್ಯೆ ಚಿಕಿತ್ಸೆ ನಡೆಯುತ್ತಿರುವ ಸಂದರ್ಭದಲ್ಲಿ ಶಾಲೆಗೆ ಆಗಮಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು, ಪ್ರತಿಭಾವಂತ ವಿದ್ಯಾರ್ಥಿ ಯಾಗಿದ್ದ ಈತ ಎಸ್.ಎಸ್. ಎಲ್.ಸಿ.ಪರೀಕ್ಷೆ ಬರೆದಿದ್ದು ಪರೀಕ್ಷೆಯಲ್ಲಿ ಶೇ.75 ಅಂಕಗಳನ್ನು ಪಡೆದುಕೊಂಡಿದ್ದ.

ಇನ್ನು ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಪಿ.ಯುಸಿ ಗೆ ದಾಖಲಾತಿ ಮಾಡಿರಲಿಲ್ಲ. ಮತ್ತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಶಿಶೀರ್ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕವನ್ನು ತ್ಯಜಿಸಿದ್ದಾನೆ.

Leave a Reply

Your email address will not be published. Required fields are marked *

error: Content is protected !!