August 25, 2026

ಸುಳ್ಯ: ಜೀಪ್-ಬೈಕು ನಡುವೆ ಅಪಘಾತ: ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯ

0
IMG-20230617-WA0042.jpg

ಸುಳ್ಯ: ಅರಂಬೂರು ಬಳಿ ಜೀಪ್ ಮತ್ತು ಬೈಕು ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಜೆ ವರದಿಯಾಗಿದೆ.

ಜೀಪೊಂದು ಸುಳ್ಯಕ್ಕೆ ಬರುತ್ತಿದ್ದ ಸಂದರ್ಭ ಸುಳ್ಯದ ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳು ಸುಳ್ಯದಿಂದ ಪೆರಾಜೆ ಕಡೆಗೆ ಹೋಗುತ್ತಿದ್ದ ಸಂದರ್ಭ ಮುಖಾಮುಖಿ ಡಿಕ್ಕಿಯಾಗಿ ರಸ್ತೆಗೆ ಎಸೆಯಲ್ಪಟ್ಟು ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿದೆ ಗಾಯಗೊಂಡ ಅಯಜ್ ದಿಲೀಪ್ ಹಾಗೂ ಸೋನಿ ಜೋಸ್ ಎಂದು ಹೇಳಲಾಗುತ್ತಿದೆ.

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!