March 25, 2026

ಉಡುಪಿ: ಬಸ್ ನಿಲ್ದಾಣದಲ್ಲಿ ಕೂಲಿ ಕಾರ್ಮಿಕರಿಬ್ಬರು ಹೊಡೆದಾಟ

0
image_editor_output_image2131827459-1686984539991.jpg

ಉಡುಪಿ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಕೂಲಿ ಕಾರ್ಮಿಕರಿಬ್ಬರು‌ ಹೊಡೆದಾಡಿಕೊಂಡ ಘಟನೆ ಉಡುಪಿ ನಗರದ‌ ನರ್ಮ್ ಬಸ್ ನಿಲ್ದಾಣದ ಬಳಿ ನಡೆದಿದೆ.

ಕೆಲಸದ ಹಣ ಕೊಡುವ ವಿಚಾರದಲ್ಲಿ ಕೂಲಿ ಕಾರ್ಮಿಕರಿಬ್ಬರು ಮಧ್ಯೆ ಜಗಳ ಶುರುವಾಗಿದೆ.

ಬಳಿಕ ಅದು ತಾರಕಕ್ಕೇರಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಆ ಪೈಕಿ‌ ಗೋಕಾಕ್ ಮೂಲದ ರಾಜೇಶ್ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಆತನಿಗೆ ಹಲ್ಲೆ ನಡೆಸಿದ ಕಾರ್ಮಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ಕೂಡಲೇ ಅಲ್ಲಿಗೆ ಬಂದ ಸಂಚಾರಿ ಪೊಲೀಸ್ ಠಾಣೆಯ ಎಸ್ ಐ ಶೇಖರ್ ಅವರು ಜಗಳ ಬಿಡಿಸಿದರು.

ಬಳಿಕ ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಗಾಯಗೊಂಡು ಅಸ್ವಸ್ಥನಾಗಿ ಬಿದ್ದಿದ್ದ ರಾಜೇಶ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!