March 25, 2026

ಬಂಟ್ವಾಳ: ಮನೆಯ ಬಾಗಿಲು ತೆರೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

0
image_editor_output_image-694550525-1686984294757.jpg

ಬಂಟ್ವಾಳ: ಮನೆಗೆ ಬಾಗಿಲು ಹಾಕಿ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ವೇಳೆ ಬಾಗಿಲು ತೆರೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯದಲ್ಲಿ ನಡೆದಿದೆ.

ಜೂ. 15 ರಂದು ಮನೆಯ ಒಡತಿ ಗುಣವತಿ ಅವರು ಬೆಳಿಗ್ಗೆ 8-30 ರ ವೇಳೆಗೆ ಮನೆಯ ಹಿಂಬಾಗಿಲನ್ನು ಮುಚ್ಚಿ ಎದುರು ಬಾಗಿಲಿಗೆ ಬೀಗ ಹಾಕಿ ತೋಟದ ಕೆಲಸಕ್ಕೆ ಹೋಗಿದ್ದರು.

ಕೆಲಸ ಮುಗಿಸಿ ಮಧ್ಯಾಹ್ನ 1-30ರ ಗಂಟೆಗೆ ಊಟಕ್ಕೆ ಮನೆಗೆ ಬಂದಾಗ ಹಿಂಬಾಗಿಲು ತೆರದಿರುವುದು ಕಂಡು ಬಂದಿದೆ.

ಎದುರು ಬಾಗಿಲಿನ ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ಕೋಣೆಯಲ್ಲಿ ಗೋದ್ರೆಜ್ ನ ಬಾಗಿಲು ತೆರೆದುಕೊಂಡಿತ್ತು.

ನೆಲದ ಮೇಲೆ ಬಟ್ಟೆಗಳು ಚೆಲ್ಲಿಪಿಲ್ಲಿಯಾಗಿತ್ತು. ಗೋದ್ರೆಜ್ ನ ಸೇಪ್ ಲಾಕರ್ ತೆರೆದುಕೊಂಡಿದ್ದು, ಅದರೊಳಗೆ ಇರಿಸಲಾಗಿದ್ದ ಸುಮಾರು ನಾಲ್ಕುವರೆ ಪವನ್ ತೂಕದ ಕರಿಮಣಿ ಸರ, ಒಂದುವರೆ ಪವನ್ ತೂಕದ ಬೆಂಡೋಲೆ, ಅರ್ಧ ಪವನ್ ತೂಕದ ಪವನ್ ತೂಕದ ಬೆಂಡೋಲೆ, ಸುಮಾರು 3 ಗ್ರಾಂ ತೂಕದ ಗಣಪತಿ ಪದಕ, ಹಾಗೂ ಮೂಗುತ್ತಿ ಸೇರಿದಂತೆ ಒಟ್ಟು 53 ಗ್ರಾಂ ತೂಕದ ಕಾಣೆಯಾಗಿದ್ದು, ಒಟ್ಟು 52 ಗ್ರಾಂ ತೂಕದ 2,12,000 ಮೌಲ್ಯದ ಚಿನ್ನಾಭರಣಗಳು ಕಳವು ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!