ನೀಟ್ ನಲ್ಲಿ ಶಾಮೀಕ್ ಅಬ್ದುಲ್ ರಹಿಮಾನ್ ಗೆ ದೇಶದಲ್ಲಿಯೇ 180 ರ್ಯಾಂಕ್: ವಿಟ್ಲದ ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ಚೆಯರ್ಮ್ಯಾನ್, ಡಾ. ವಿ.ಕೆ ಅಬ್ದುಲ್ ಬಶೀರ್ ಅವರ ಪುತ್ರ
ವಿಟ್ಲ: ಪ್ರಸ್ತುತ ಸಾಲಿನ ನೀಟ್ ಪರೀಕ್ಷೆಯಲ್ಲಿ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿ ಶಾಮಿಕ್ ಅಬ್ದುಲ್ ರೆಹಮಾನ್ ರಾಷ್ಟ್ರಕ್ಕೆ 180ನೇ ರ್ಯಾಂಕ್ ಮೂಲಕ ಹಾಸನ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಜನಪ್ರಿಯ ವೈದ್ಯ, ಎಂ.ಫ್ರೆಂಡ್ಸ್ ಸದಸ್ಯ ಡಾ. ಅಬ್ದುಲ್ ಬಶೀರ್ ವಿ ಕೆ. ಮತ್ತು ಫಾತಿಮಾ ನಸ್ರೀನ್ ದಂಪತಿ ಪುತ್ರ *ಶಾಮಿಕ್*
NEET ನಲ್ಲಿ ರಾಷ್ಟ್ರಕ್ಕೆ 180ನೇ ರ್ಯಾಂಕ್ (720 ರಲ್ಲಿ 702) ಆಗಿಯೂ ಎಕ್ಸ್’ಪರ್ಟ್ ಕಾಲೇಜ್ ಸೆಕೆಂಡ್ ಟಾಪರ್ ಆಗಿ ಈ ಸಾಧನೆ ಮಾಡಿದ್ದಾರೆ.
ಶಾಮಿಕ್ ಗೆ ರಾಷ್ಟ್ರದ ಅತ್ಯುನ್ನತ ಮೆಡಿಕಲ್ ಕಾಲೇಜು ಏಮ್ಸ್ ಅಥವಾ ಮೌಲಾನಾ ಆಝಾದ್ ನಲ್ಲಿ ಮೆಡಿಕಲ್ ಸೀಟಿಗೆ ಆಹ್ವಾನದ ಸಾಧ್ಯತೆ ಎಂದು ತಿಳಿದುಬಂದಿದೆ.
ಜನಪ್ರಿಯ ವೈದ್ಯ, ಎಂ.ಫ್ರೆಂಡ್ಸ್ ಸದಸ್ಯ ಡಾ. ಅಬ್ದುಲ್ ಬಶೀರ್ ವಿ ಕೆ. ಮತ್ತು ಫಾತಿಮಾ ನಸ್ರೀನ್ ದಂಪತಿ ಪುತ್ರನಾಗಿರುವ ಶಾಮಿಕ್ ಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.
ವಿಟ್ಲದ ಕಂಬಳಬೆಟ್ಟು ಮೂಲದವರಾದ ಪ್ರಸ್ತುತ ಹಾಸನದಲ್ಲಿ ನೆಲೆಸಿರುವ ಜನಪ್ರಿಯ ಫೌಂಡೇಷನ್ ಅಧ್ಯಕ್ಷರಾಗಿರುವ ಡಾ.ಅಬ್ದುಲ್ ಬಷೀರ್ ರವರ ಪುತ್ರ ಶಾಮಿಕ್ ಅಬ್ದುಲ್ ರೆಹಮಾನ್ ರವರು ಪಿಯುಸಿಯಲ್ಲಿ ಶೇಕಡ 98.16 ಅಂಕ ಪಡೆದು ಸಾಧನೆ ಮಾಡಿದ್ದರು.
ಮಂಗಳೂರಿನ ಎಕ್ಸಪರ್ಟ್ ಕಾಲೇಜಿನಲ್ಲಿ ವಿಜ್ಞಾನ ವಿಭಾದಲ್ಲಿ ಓದುತ್ತಿದ್ದ ಶಾಮಿಕ್ ರವರು ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಭಾಷಾ ವಿಷಯಗಳಲ್ಲಿ 190 ಅಂಕ ಪಡೆದರೆ, 4 ಪ್ರಮುಖ ವಿಷಯಗಳಲ್ಲಿ 400 ರಲ್ಲಿ 399 ಅಂಕ ಗಳಿಸುವ ಮೂಲಕ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.
ಡಾ.ಅಬ್ದುಲ್ ಬಷೀರ್ ಹಾಗೂ ಶ್ರೀಮತಿ ಫಾತಿಮಾ ನಸ್ರೀನ್ ಬಷೀರ್ ರವರ ಮೂರನೇ ಮಗನಾಗಿರುವ ಶಾಮಿಕ್ ರವರು ಮುಂದೆ ವೈದ್ಯಕೀಯ ಶಿಕ್ಷಣ ಪಡೆಯುವ ಹಂಬಲ ವ್ಯಕ್ತಪಡಿಸಿದ್ದು ಸಿಇಟಿ, ನೀಟ್ ಪರೀಕ್ಷೆಗಳಿಗೆ ಸಿದ್ದತೆ ನಡೆಸಿದ್ದರು.
ಶಾಮಿಕ್ ರವರ ಅಣ್ಣಂದಿರಾದ ಶಾರುಖ್ ಮತ್ತು ಶಫಾಖ್ ವೈದ್ಯಕೀಯ ಉನ್ನತ ಶಿಕ್ಷಣ ಪಡೆಯುತ್ತಿದ್ದು, ಇದೀಗ ಶಾಮೀಕ್ ವೈದ್ಯಾಕೀಯ ಉನ್ನತ ಶಿಕ್ಷಣ ಪಡೆಯುವ ಗುರಿ ಇಟ್ಟುಕೊಂಡಿದ್ದಾರೆ.




