June 30, 2026

ಲೋಕಾಯುಕ್ತ ಬಲೆಗೆ ಬಿದ್ದ ಸಹಾಯಕ ಇಂಜಿನೀಯರ್

0
image_editor_output_image2005767701-1686890496612.jpg

ದಾವಣಗೆರೆ: ನಗರ ಸಭೆ ಸದಸ್ಯೆ ಜೊತೆಗೆ ಇಲ್ಲಿನ ಸಹಾಯಕ ಇಂಜಿನಿಯರ್ ಅಬ್ದುಲ್ ಹಮೀದ್ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಮೊಹಮ್ಮದ್ ಮಜಿದ್ ಎಂಬ ಗುತ್ತಿಗೆದಾರನಿಂದ ಕಾಮಗಾರಿಗೆ 5 ಪರ್ಸೆಂಟ್ ಕಮಿಷನ್ ರೂಪದಲ್ಲಿ 20 ಸಾವಿರ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾನೆ.

ಸಹಾಯಕ ಇಂಜಿ‌ನೀಯರ್ ಅಬ್ದುಲ್ ಹಮೀದ್ 10 ಲಕ್ಷ ಕಾಮಗಾರಿಗೆ 5 ಪರ್ಸೆಂಟ್ ಎಂದು ಫಿಕ್ಸ್‌‌ ಮಾಡಿದ್ದ. ಅದರಂತೆ ಈಗಾಗಲೇ 20 ಸಾವಿರ ರೂಪಾಯಿ ನೀಡಿದ್ದು, ಮತ್ತೇ 20 ಸಾವಿರಕ್ಕೆ ಬೇಡಿಕೆಯಿಟ್ಟಿದ್ದನಂತೆ. ಖಚಿತ ಮಾಹಿತಿ ಮೇರೆಗೆ ಹರಿಹರ ನಗರದ ಅವರ ಮನೆಯಲ್ಲಿ ಲಂಚ ಸ್ವೀಕರಿಸುವಾಗ ದಾವಣಗೆರೆ ಲೋಕಾಯಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತ್ರತ್ವದಲ್ಲಿ ಇನ್ಸ್ ಪೇಕ್ಟರ್ಗಳಾದ ಎಚ್ ಎನ್ ಆಂಜನೇಯ ಹಾಗೂ ಎಚ್ಎಸ್ ರಾಷ್ಟ್ರಪತಿ ಹಮೀದ್ರನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!