June 30, 2026

ಮಂಗಳೂರು: ಗೆಳೆಯನ ಫಸ್ಟ್‌ನೈಟ್‌ಗೆ ಶುಭಕೋರಿ ಸ್ನೇಹಿತರೆಲ್ಲಾ ಸೇರಿ ಶುಭಕೋರಿದ ಬ್ಯಾನರ್ ವೈರಲ್

0
image_editor_output_image-865004376-1686891036672.jpg

ಮಂಗಳೂರು: ಗೆಳೆಯನಿಗೆ ಫಸ್ಟ್‌ನೈಟ್‌ಗೆ ಶುಭಕೋರಿ ಸ್ನೇಹಿತರೆಲ್ಲಾ ಸೇರಿ ವಿಶ್ ಮಾಡಿ ಬ್ಯಾನರ್ ಹಾಕಿದ್ದಾರೆ.

ಹೀಗೆ ಮದುವೆಯ ಮೊದಲ ರಾತ್ರಿಗೆ ವಿಶ್ ಮಾಡಿ ಬ್ಯಾನರ್ ಅಳವಡಿಸಿರೋದು ಮಂಗಳೂರಿನಲ್ಲಿ. ಅದು ಕೂಡಾ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಪೊಲೀಸ್ ಠಾಣೆಯ ಕಾಂಪೌಂಡ್‌ಗೆ ತಾಗಿಕೊಂಡಂತೆ ಈ ಬ್ಯಾನರ್ ಹಾಕಲಾಗಿದೆ.

ಸದ್ಯ ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕೆಲವರು ಇದನ್ನು ಜಸ್ಟ್‌ ಫಾರ್ ಫನ್‌ ಎಂದು ತಗೊಂಡ್ರೆ, ಮತ್ತೆ ಕೆಲವರು ಇವತ್ತಿನ ಯುವಜನರ ಮನಸ್ಥಿತಿಯನ್ನು ಟೀಕಿಸುತ್ತಿದ್ದಾರೆ.

ಯುವಕನೊಬ್ಬನ ಮದುವೆಯ ಮೊದಲ ರಾತ್ರಿಯ ಸಂಭ್ರಮ ಎಂದು ಮತ್ತೊಂದು ಹೋರ್ಡಿಂಗ್ಸ್ ಹಾಕಲಾಗಿದೆ. ರಾತ್ರಿಯಿಡೀ ಹೋರಾಡಿ ಗೆದ್ದು ಬಾ ಎಂದು ಗೆಳೆಯರು ಹಾರೈಸಿ ಸರಕಾರಿ ಜಾಗದಲ್ಲಿ ದೊಡ್ಡ ಸಾಧನೆ ಎಂಬಂತೆ ಹೋರ್ಡಿಂಗ್ ಹಾಕಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಈ ಬ್ಯಾನರ್ ನೋಡಿ ಜನರು ಇದು ತಮಾಷೆಯಲ್ಲ, ಸಾರ್ವಜನಿಕ ಪ್ರದೇಶದಲ್ಲಿ ಇಂಥಾ ಹೋರ್ಡಿಂಗ್ ಹಾಕಿಸಿರೋದು ಸರಿಯಲ್ಲ ಎಂದು ಟೀಕಿಸಿದ್ದಾರೆ

Leave a Reply

Your email address will not be published. Required fields are marked *

You may have missed

error: Content is protected !!