ಅತ್ತೆಯನ್ನೇ ಕೊಂದ ಸೊಸೆ
ಬೆಳಗಾವಿ: ಪತಿ ಹಾಗೂ ಅತ್ತೆಯ ಮೇಲೆ ಸೊಸೆಯೊಬ್ಬಳು ಹಲ್ಲೆ ಮಾಡಿಸಿ ಅತ್ತೆಯನ್ನು ಕೊಲ್ಲಿಸಿದ ಪ್ರಕರಣ ಬೈಲಹೊಂಗಲದಲ್ಲಿ ನಡೆದಿದೆ.
ಮೃತಳನ್ನು ಮಹಾಬೂಬಿ ಯಾಕೂಶಿ (53) ಎಂದು ಗುರುತಿಸಲಾಗಿದೆ. ಮೇಹರೂಣಿ ಯಾಕೂಶಿ ಹಲ್ಲೆ ಮಾಡಿಸಿದ ಮಹಿಳೆ ಎಂದು ತಿಳಿದು ಬಂದಿದೆ. ಗಂಡ ಸುಬಾನ್ ಬೇರೆ ಮನೆ ಮಾಡಲಿಲ್ಲ ಎಂದು ಪತ್ನಿ ಈ ಕೃತ್ಯ ಎಸಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೇಹರೂಣಿ ಯಾಕೂಶಿ, ಪತಿ ಬೇರೆ ಮನೆ ಮಾಡಲಿಲ್ಲ ಎಂದು ಮನೆ ತೊರೆದು ತವರು ಮನೆಗೆ ತೆರಳಿದ್ದಾಳೆ.
ಸ್ವಲ್ಪ ದಿನಗಳ ಬಳಿಕ ಅತ್ತೆ ಹಾಗೂ ಪತಿಯನ್ನು ತನ್ನ ತವರು ಮನೆಗೆ ಕರೆಸಿದ್ದಾಳೆ. ಈ ವೇಳೆ ತನ್ನ ಇಬ್ಬರೂ ಸಹೋದರರೊಂದಿಗೆ ಸೇರಿ ಅತ್ತೆ ಹಾಗೂ ಪತಿಯ ಮೇಲೆ ರಾಡ್‍ನಿಂದ ದಾಳಿ ನಡೆಸಿದ್ದಾರೆ ಎಂಬ ಆರೋಪ ಬಂದಿದೆ.




