August 12, 2026

ವಿಟ್ಲ ಹೊರೈಝನ್ ಶಾಲೆ: ಎಲ್‌ಕೆಜಿ ,ಯುಕೆಜಿ ತರಗತಿ ಪ್ರಾರಂಭೋತ್ಸವ‌

0
image_editor_output_image1440877985-1686557618719.jpg

ವಿಟ್ಲ; ವಿಟ್ಲ ಜಮಾಅತ್ ಅಧೀನದ ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಎಲ್‌ಕೆಜಿ ,ಯುಕೆಜಿ ವಿಭಾಗದ ಪ್ರಾರಂಭೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.

ತಳಿರು ತೋರಣಗಳಿಂದ ಸಿಂಗರಿಸಿದ ತರಗತಿಗಳಿಗೆ ಪುಟಾಣಿಗಳನ್ನು‌ ಹೂ ಗುಚ್ಛ ,ಸಿಹಿ ತಿಂಡಿ ನೀಡಿ ಬರಮಾಡಿಕೊಳ್ಳಲಾಯಿತು.
ಸದರ್ ಉಮರ್ ಸ‌ಅದಿ ಪ್ರಾರ್ಥನೆ ಮೂಲಕ ತರಗತಿಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಸಮಿತಿ ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್,ಕಾರ್ಯದರ್ಶಿ ನೋಟರಿ ವಕೀಲರು ಅಬೂಬಕರ್ ವಿಟ್ಲ , ಸಂಚಾಲಕ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಲೆಕ್ಕ ಪರಿಶೋಧಕ ಇಕ್ಬಾಲ್ ಮೇಗಿನಪೇಟೆ, ಮೇಲ್ವಿಚಾರಕ ಗಫೂರ್ ಮೇಗಿನಪೇಟೆ, ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು, ಸಹ ಮುಖ್ಯ ಶಿಕ್ಷಕಿ ಗಾಯತ್ರಿ , ಶಾಲಾ ಶಿಕ್ಷಕರು, ಜಮಾತ್ ಮಾಜಿ ಅಧ್ಯಕ್ಷ ಇಬ್ರಾಹಿಂ ಹಳೆಮನೆ,ಜಮಾತ್ ಕಾರ್ಯದರ್ಶಿ ಹಮೀದ್ ಬದ್ರಿಯಾ, ಅಬೂಬಕರ್ ಅನಿಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!