February 3, 2026

ಸುರತ್ಕಲ್ | ಮುಕ್ಕ ಚೆಕ್ ಪೋಸ್ಟ್ ಲಾಡ್ಜ್ ನಲ್ಲಿ ಜೂಜಾಟ: ಲಾಡ್ಜ್ ಸಿಬ್ಬಂದಿ ಸಹಿತ 7 ಮಂದಿಯ ಸೆರೆ

0
image_editor_output_image1968279240-1686549675356.jpg

ಸುರತ್ಕಲ್: ಇಲ್ಲಿನ ಮುಕ್ಕ ಚೆಕ್ ಪೋಸ್ಟ್ ನಲ್ಲಿರುವ ಲಾಡ್ಜ್ ನ ರೂಮೊಂದರಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ 7 ಮಂದಿ ಹಾಗೂ ಆಡಲು ಅವಕಾಶ ಮಾಡಿಕೊಟ್ಟ ಇಬ್ಬರು ಲಾಡ್ಜ್ ಸಿಬ್ಬಂದಿಯನ್ನು ಸುರತ್ಕಲ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ‌.

ಇಸ್ಪೀಟ್ ಆಟವಾಡುತ್ತಿದ್ದ ಮುಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿಗಳಾದ ಲಾಲ್ ಸಾಬ್ (31), ಅಮೀರ್ ಘಣಿಸಾಬ್ (31), ದಸ್ತಗಿರ್ ಸಾಬ್ (32), ಸಿದ್ದಣ್ಣ (47 ) ಮುಹಮ್ಮದ್ ರಫೀಕ್ (34), ಪರಶುರಾಮ (29), ಜಿತೇಂದ್ರ ಹೀರಾಸಿಂಗ್ (34) ಹಾಗೂ ಜೂಜು ಆಡಲು ಸ್ಥಳ ನೀಡಿದ್ದ ಲಾಡ್ಜ್ ಮ್ಯಾನೇಜರ್ ಪಡುಬಿದ್ರೆ ಪಲಿಮಾರು ನಿವಾಸಿ ಬಾಬು ಚಂದ್ರಶೇಖರ್ (62) ಸಿಬ್ಬಂದಿ ಹೆಜಮಾಡಿ ಕೊಡಿ ನಿವಾಸಿ ರಕ್ಷಿತ್ (23) ರನ್ನು ಪೊಲೀಸರು ಬಂಧಿಸಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!