August 12, 2026

ಕಾಸರಗೋಡು: ಎಮರ್ಜೆನ್ಸಿ ಲೈಟ್‌ನೊಳಗೆ ಬಚ್ಚಿಟ್ಟು ಚಿನ್ನ ಸಾಗಾಟ: ಓರ್ವ ಪೊಲೀಸರ ವಶಕ್ಕೆ
 

0
IMG-20230504-WA0062.jpg

ಕಾಸರಗೋಡು: ಅಕ್ರಮ ಚಿನ್ನ ಸಾಗಾಟಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಡಿವೈಎಸ್ಪಿಪಿ ಬಾಲಕೃಷ್ಣನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಇಂದು ಬೆಳಿಗ್ಗೆ ಬೇಕಲ ಸಮೀಪದ ಹೊಸಕೋಟೆ ಎಂಬಲ್ಲಿ ವಾಹನ ತಡೆದು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಚಿತ್ತಾರಿಯ ನಿಜಾರ್ (36) ಎಂಬಾತನನ್ನು ಬಂಧಿಸಲಾಗಿದೆ.

ಕಾರಿನಲ್ಲಿದ್ದ 858 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿದು ಕಾರಿನಲ್ಲಿ ಬರುತ್ತಿದ್ದಾಗ ತಪಾಸಣೆ ನಡೆಸಿದ್ದು, ಬ್ಯಾಗ್ ನಲ್ಲಿ ಸಾಗಿಸಲಾಗುತ್ತಿತ್ತು. ಎಮರ್ಜೆನ್ಸಿ ಲೈಟ್ ನೊಳಗೆ ಬಚ್ಚಿಟ್ಟು ಚಿನ್ನ ಸಾಗಾಟ ಮಾಡಲಾಗುತ್ತಿತ್ತು

Leave a Reply

Your email address will not be published. Required fields are marked *

You may have missed

error: Content is protected !!