ಎಸ್ ಎಸ್ ಎಲ್ ಸಿ ಮರುಮೌಲ್ಯ ಮಾಪನ : ವಿಟ್ಲ ಜೇಸಿ ಶಾಲೆಗೆ ಗರಿಷ್ಟಅಂಕಗಳ ಸೇರ್ಪಡೆ
ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಕೃಷ್ಣ 2023ರ SSLC ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 5 ಅಂಕಗಳ ಸೇರ್ಪಡೆಯೊಂದಿಗೆ ಒಟ್ಟು ಅಂಕಗಳು 619ನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ. ಹಾಗೆಯೇ ತೇಜಸ್ವಿ ತೆಂಕಬೈಲ್ ಗೆ 3 ಅಂಕ ಸೇರ್ಪಡೆಯೊಂದಿಗೆ ಒಟ್ಟು 616 ಅಂಕಗಳು ಹಾಗೂ ಸಮರ್ ಖದೀಜಳಿಗೆ 14 ಅಂಕಗಳ ಸೇರ್ಪಡೆಯೊಂದಿಗೆ ಒಟ್ಟು 613 ಅಂಕಗಳನ್ನು ಪಡೆದಿದ್ದಾರೆ.
ಹೆಚ್ಚುವರಿ ಅಂಕ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು , ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದೆ.




