March 21, 2026

ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಜಾಹೀರಾತು ಫಲಕ: ತಾಯಿ, ಮಗಳು ಸಾವು

0
image_editor_output_image517531528-1686031360009.jpg

ಲಕ್ನೋ: ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಜಾಹೀರಾತು ಫಲಕ ಬಿದ್ದು ತಾಯಿ ಮತ್ತು ಮಗಳು ಸಾವಿಗೀಡಾದ ದಾರುಣ ಘಟನೆ ಉತ್ತರಪ್ರದೇಶದ ಲಕ್ನೋದ ಇಕಾನಾ ಸ್ಟೇಡಿಯಂ ಬಳಿ ನಡೆದಿದೆ.

ಪ್ರೀತಿ ಜಗ್ಗಿ(38) ಮತ್ತು ಏಂಜಲ್(15) ಮೃತ ದುರ್ದೈವಿಗಳಾಗಿದ್ದು, ಕಾರಿನ ಡ್ರೈವರ್ ಸರ್ತಾಜ್ (28) ಭೀಕರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಾಯಿ ಹಾಗೂ ಮಗಳು ಮಾಲ್‌ಗೆ ಹೋಗುತ್ತಿದ್ದಾಗ ಏಕಾನಾ ಸ್ಟೇಡಿಯಂ ಹತ್ತಿರದ ಗೇಟ್ ನಂಬರ್ ಎರಡರ ಮುಂಭಾಗದಲ್ಲಿದ್ದ ಜಾಹೀರಾತು ಫಲಕ ಏಕಾಏಕಿ ಮಹೇಂದ್ರಾ ಎಸ್ಯುವಿ ಮೇಲೆ ಬಿದ್ದು ಘಟನೆ ಸಂಭವಿಸಿದೆ. ಈ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ಕಮೀಷನರ್ ಅಮಿತ್ ಕುಮಾವತ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!