March 23, 2026

ಬಂಟ್ವಾಳ: ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಗೆ ಠಾಣೇಯಲ್ಲೇ ಸೀಮಂತ ಕಾರ್ಯಕ್ರಮ

0
image_editor_output_image-867505461-1685866678769.jpg

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯ ವತಿಯಿಂದ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಆಗಿರುವ ಸಕ್ಕುಬಾಯಿ .ಜೆ ಆರ್ ಅವರಿಗೆ ಠಾಣೇಯಲ್ಲೇ ಸೀಮಂತ ಕಾರ್ಯಕ್ರಮ ನಡೆಯಿತು.

ಸಕ್ಕುಬಾಯಿ ಅವರು ಮೂಲತಃ ಗದಗ ಜಿಲ್ಲೆಯವರಾಗಿದ್ದು, ಮೆಲ್ಕಾರ್ ಟ್ರಾಫಿಕ್ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರು ಏಳುವರೆ ತಿಂಗಳ ಗಭಿ೯ಣಿಯಾಗಿದ್ದು ಹೆರಿಗೆ ರಜೆಯಲ್ಲಿ ಹೋಗುವರಿದ್ದ ಕಾರಣ ಅವರನ್ನು ಠಾಣೆಯ ವತಿಯಿಂದ ಸಿಹಿ ತಿಂಡಿಗಳ ಸಹಿತ ವಿವಿಧ‌ ಖಾದ್ಯಗಳನ್ನು ಬಡಿಸಿ ಸರಳ ಸೀಮಂತ ಕಾರ್ಯಕ್ರಮ ನೆರವೇರಿಸಿ ಕಳುಹಿಸಿಕೊಟ್ಟಿದ್ದಾರೆ.

ಈ ಸಂದರ್ಭ ಈ ಮೆಲ್ಕಾರ್ ಟ್ರಾಫಿಕ್ ಠಾಣೆಯ ಎಸ್.ಐ.ಮೂರ್ತಿ ಮತ್ತವರ ಸಿಬ್ಬಂದಿ ವರ್ಗ ಸಹೋದ್ಯೋಗಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!