KSRTC ಬಸ್‌ನಲ್ಲಿ ಅಪರಿಚಿತ ವ್ಯಕ್ತಿಯಿಂದ ಅಸಭ್ಯವಾಗಿ ವರ್ತನೆ: ಹಿಗ್ಗಾ ಮುಗ್ಗಾ ಥಳಿಸಿದ ಯುವತಿ
ಮಂಡ್ಯ: ಕೆಎಸ್‌ಆರ್ ಟಿಸಿ ಬಸ್‌ನಲ್ಲಿ ಮಹಿಳೆಯೋರ್ವರು ಪ್ರಯಾಣಿಸುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬಯುವತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಆತನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ.
ಮಹಿಳೆಯು ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ವ್ಯಕ್ತಿಯೊಬ್ಬ ಆಕೆಯ ಜೊತೆ ಪದೇ ಪದೇ ಅಸಭ್ಯವಾಗಿ ವರ್ತಿಸುತ್ತಿದ್ದನು.
ಆತನಿಗೆ ಮಹಿಳೆ ಎಚ್ಚರಿಕೆ ನೀಡಿದರು ಆತ ಚುಡಾಯಿಸಲು ಪ್ರಯತ್ನಿಸಿದ್ದಾನೆ. ಅಲ್ಲದೆ ಯುವತಿಯನ್ನು ಸ್ಪರ್ಶಿಸುವ ಮೂಲಕ ತೊಂದರೆ ಕೊಡುತ್ತಿದ್ದನು. ಯುವತಿಗೆ ಸಿಟ್ಟು ಬಂದು ಆತನ ಕಪಾಳಕ್ಕೆ ಬಾರಿಸಿದ್ದಾಳೆ. ಬಸ್ಸಿನಲ್ಲಿದ್ದ ಯಾರು ಕೂಡ ಸಹಾಯಕ್ಕೆ ಬರಲಿಲ್ಲ. ಆಕೆ ಒಬ್ಬಳೇ ಪುಂಡನಿಗೆ ಹಿಗ್ಗಾ ಮುಗ್ಗಾ ಥಳಿಸಿದಳು.
ಪ್ರಯಾಣಿಕರೋಬ್ಬರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಬಗ್ಗೆ ಪ್ರಕರಣ ಯಾವುದೇ ದಾಖಲಾಗಿಲ್ಲ ಎಂದು ಹೇಳಲಾಗಿದೆ. ಆದರೆ ಯುವತಿಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಹಿಳೆಯರನ್ನು ಚುಡಾಯಿಸುವ ಪುಂಡರಿಗೆ ಇದೇ ರೀತಿ ಮಾಡಬೇಕು ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




