March 20, 2026

ಅವಮಾನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಾಧು ನರೇಂದ್ರ ಗಿರಿ ಆತ್ಮಹತ್ಯೆ: ಸಿಬಿಐ ಮಾಹಿತಿ

0
image_editor_output_image371761039-1637831247979.jpg

ನವದೆಹಲಿ: ಅಖಿಲ ಭಾರತೀಯ ಅಖಾಡ ಪರಿಷತ್‌ ಅಧ್ಯಕ್ಷರಾಗಿದ್ದ ಮಹಂತ ನರೇಂದ್ರ ಗಿರಿ ಅವರು ತಮ್ಮ ಶಿಷ್ಯರಿಂದಲೇ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಸಮಾಜದಲ್ಲಿ ಎದುರಾಗಬಹುದಾದ ಮಾನನಷ್ಟ ಮತ್ತು ಅವಮಾನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಸಿಬಿಐ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ.

ಮಹಂತ್‌ ಅವರು ಸಾವಿಗೂ ಮುನ್ನ ವಿಡಿಯೊವೊಂದನ್ನು ರೆಕಾರ್ಡ್‌ ಮಾಡಿದ್ದು, ಅದರಲ್ಲಿ ‘ನಾನು ಮಹಿಳೆಯೊಂದಿಗೆ ಆಕ್ಷೇಪಾರ್ಹ ಭಂಗಿಯಲ್ಲಿದ್ದ ತಿರುಚಿದ ವಿಡಿಯೊವೊಂದನ್ನು ಆನಂದ ಗಿರಿ ಅವರು ಬಿಡುಗಡೆ ಮಾಡಲು ಹೊರಟ್ಟಿದ್ದರು’ ಎಂದು ಮಹಂತ ಅವರು ದೂರಿದ್ದಾರೆ.

ನವೆಂಬರ್‌ 20ರಂದು ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ, ಅಲಹಾಬಾದ್‌ನ ಹನುಮಾನ್ ದೇವಸ್ಥಾನದ ಅರ್ಚಕ ಆನಂದ ಗಿರಿ, ಆದ್ಯ ಪ್ರಸಾದ್ ತಿವಾರಿ ಮತ್ತು ಅವರ ಮಗ ಸಂದೀಪ್ ತಿವಾರಿ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಆರೋಪವನ್ನು ಹೊರಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!