August 12, 2026

ಕೆಲಸಕ್ಕೆ ಹೋಗುವಂತೆ ಹೇಳಿದಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

0
image_editor_output_image972833893-1685854809273.jpg

ಬೆಳಗಾವಿ: ಮನೆಯಲ್ಲೇ ಕಾಲಕಳೆಯುತ್ತಿದ್ದ ಪತಿಗೆ ಕೆಲಸಕ್ಕೆ ಹೋಗುವಂತೆ ಹೇಳಿದಕ್ಕೆ ಪತ್ನಿಯನ್ನೇ ಕೊಲೆಗೈದ ಪ್ರಕರಣ ಮೂಡಲಗಿಯ ನಾಗನೂರ ಗ್ರಾಮದಲ್ಲಿ ನಡೆದಿದೆ.

ಬಸವ್ವ (35) ಕೊಲೆಯಾದ ಮಹಿಳೆ. ಹಣಮಂತ ಹಿಡಕಲ್ ಕೊಲೆಗೈದ ಆರೋಪಿ ಎಂದು ತಿಳಿದು ಬಂದಿದೆ. ಕಳೆದ ಕೆಲ ದಿನಗಳಿಂದ ಆರೋಪಿ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇರುತ್ತಿದ್ದ.

ಇದರಿಂದ ಬೇಸತ್ತ ಪತ್ನಿ ಕೆಲಸಕ್ಕೆ ಹೋಗುವಂತೆ ಹೇಳಿದ್ದಾಳೆ. ಈ ವೇಳೆ ಸಿಟ್ಟಿಗೆದ್ದ ಆರೋಪಿ ಕತ್ತು ಹಿಸುಕಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!