September 27, 2026

ಸುರತ್ಕಲ್‌: ನೀರು ಸೇದುತ್ತಿದ್ದ ಮಹಿಳೆಯ ಚಿನ್ನದ ಸರ ಎಗರಿಸಿ ಪರಾರಿ

0
image.jpg

ಸುರತ್ಕಲ್: ಬಾವಿಯಿಂದ ನೀರು ಸೇದುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಎಗರಿಸಿದ ಘಟನೆ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ತಡಂಬೈಲ್‌ ಎಂಬಲ್ಲಿ ವರದಿಯಾಗಿದೆ.

ಪುಷ್ಪಾ (70) ಎಂಬವರು ಇಂದು ಬೆಳಗ್ಗೆ ತಡಂಬೈಲ್‌ನ ತನ್ನ ಮನೆಯ ಕಂಪೌಂಡ್‌ ಒಳಭಾಗದಲ್ಲಿದ್ದ ಬಾವಿಯಿಂದ ನೀರು ಸೇದುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ಕುತ್ತಿಗೆಯಲ್ಲಿದ್ದ ಅಂದಾಜು 1.25 ಲಕ್ಷ ರೂ. ಬೆಲೆಯ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ ಎಂದು ಅವರು ಸುರತ್ಕಲ್‌ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ.

 

ಸುರತ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ

Leave a Reply

Your email address will not be published. Required fields are marked *

You may have missed

error: Content is protected !!