August 12, 2026

ಕಣ್ಣೂರಿನಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ: ಪಶ್ಚಿಮ ಬಂಗಾಲ ನಿವಾಸಿಯ ಬಂಧನ

0
ms-30623-train.jpg

ಕಾಸರಗೋಡು : ಕಣ್ಣೂರು ರೈಲು ನಿಲ್ದಾಣದಲ್ಲಿ ಜೂ. 1 ರಂದು ಮುಂಜಾನೆ ಆಲಪ್ಪುಳ – ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ನಿವಾಸಿಯನ್ನು ಬಂಧಿಸಿದ್ದಾರೆ.

ಘಟನೆ ನಡೆದ ಸ್ಥಳದ ಪಕ್ಕದ ಬಿಪಿಸಿಎಲ್ ದಾಸ್ತಾನು ಕೇಂದ್ರದ ಸಿಸಿಟಿವಿಯಲ್ಲಿ ಪತ್ತೆಯಾದ ದೃಶ್ಯದ ಜಾಡು ಹಿಡಿದು ಈತನನ್ನು ಬಂಧಿಸಲಾಗಿದೆ.

ತನಿಖಾ ತಂಡ ಆತನನ್ನು ಸಮಗ್ರವಾಗಿ ವಿಚಾರಣೆ ನಡೆಸುತ್ತಿದೆ. ಡಿವೈಎಸ್ ಪಿ ಮ್ಯಾಥ್ಯೂ ರಾಜ್ ಕಲ್ಲಕಾಟ್ ಅವರ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!