ಬಂಟ್ವಾಳ : ಜಮೀಯ್ಯತುಲ್ ಫಲಾಹ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ
ಬಂಟ್ವಾಳ : ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪೈಲಟ್ ಹನಿಯಾ ಹನೀಫ್ ಬ್ಯಾರಿ ಅವರಿಗೆ ಸನ್ಮಾನ ಕಾರ್ಯಕ್ರಮವು ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿ ಶುಕ್ರವಾರ ನಡೆಯಿತು.
ಸನ್ಮಾನವನ್ನು ಸ್ವೀಕರಿಸಿದ ಕಮರ್ಷಿಯಲ್ ಪೈಲಟ್ ಕ್ಯಾಪ್ಟನ್ ಹನಿಯಾ ಹನೀಫ್ ಬ್ಯಾರಿ ಮಾತನಾಡಿ
, ವಿದ್ಯಾರ್ಥಿಗಳು ಇಚ್ಚಾಶಕ್ತಿ ಹಾಗೂ ನಿರ್ದಿಷ್ಟ ಗುರಿಯೊಂದಿಗೆ ಶಿಕ್ಷಣವನ್ನು ಮುಂದುವರಿಸಿದರೆ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಘಟಕಾದ್ಯಕ್ಷ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಎನ್ನಾರೈ ಸದಸ್ಯ ಶೌಕತ್ ಅಲಿ ಬಂಟ್ವಾಳ, ಉದ್ಯಮಿಗಳಾದ ಉಮ್ಮರ್ ಹಾಜಿ ರಾಜ್ ಕಮಲ್, ವಿ.ಎಚ್.ಅಶ್ರಫ್ ವಿಟ್ಲ ಅತಿಥಿಗಳಾಗಿ ಭಾಗವಹಿಸಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ತಾಲೂಕಿನ ವಿದ್ಯಾರ್ಥಿಗಳಾದ ಮುಹಮ್ಮದ್ ಮುಸ್ತಫಾ, ಫಾತಿಮತ್ ಶಮಾ, ನಫೀಸತ್ ಮುಫೀಝಾ, ಫಾತಿಮಾ ಶಿಫಾ, ವಫಾ ಹಲೀಮಾ, ಹನೀನಾ ಝೊಹರಾ, ಪಿಯುಸಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ಮುಹಮ್ಮದ್ ಅರ್ಫಾಝ್, ಮುಹಮ್ಮದ್ ಇರ್ಫಾನ್, ಸುಹಾ ತಸ್ನೀಹಾ, ನುಸೈಬಾ ಭಾನು, ಫಾತಿಮಾ ಸಾನಿಯಾ, ಆಯಿಶಾ ನಹಶಲ್ ಅವರನ್ನು ಪುರಸ್ಕರಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಶೇಖ್ ರಹ್ಮತ್ತುಲ್ಲಾ ಸ್ವಾಗತಿಸಿ, ನೋಟರಿ ಅಬೂಬಕ್ಕರ್ ವಿಟ್ಲ ಕಿರಾಅತ್ ಪಠಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಪ್ರಸ್ತಾವನೆಗೈದರು.
ಕೆ.ಕೆ. ಸಾಹುಲ್ ಹಮೀದ್ ವಂದಿಸಿ, ಬಿ.ಎಂ. ತುಂಬೆ ಕಾರ್ಯಕ್ರಮ ನಿರೂಪಿಸಿದರು.