ಪುತ್ತೂರು: ನಮ್ಮ ಖುಷಿ ಇನ್ನೊಬ್ಬರಿಗೆ ನೋವು ತರಬಾರದು: ಜೂನ್ 3 ರಂದು ಪುತ್ತೂರಿನಲ್ಲಿ ಕಾಂಗ್ರೆಸ್ ವಿಜಯೋತ್ಸವ ಮೆರವಣಿಗೆ ರದ್ದುಗೊಳಿಸಿದ ಶಾಸಕ ಅಶೋಕ್ ರೈ
ಪುತ್ತೂರು: ಜೂನ್ 3 ರಂದು ಪುತ್ತೂರಿನಲ್ಲಿ ಕಾಂಗ್ರೆಸ್ ವಿಜಯೋತ್ಸವ ಮೆರವಣಿಗೆ ಕೈಗೊಂಡಿದ್ದು ಇದೀಗ ಶಾಸಕರು ಅದನ್ನು ರದ್ದುಗೊಳಿಸುವ ಮೂಲಕ ಮಾನವೀಯ ಕರೆಯನ್ನು ಕೊಟ್ಟಿದ್ದಾರೆ.
ಜೂನ್ 3 ರಂದು ನಡೆಯಬೇಕಿದ್ದ ಮೆರವಣಿಗೆಯನ್ನು ರದ್ದುಗೊಳಿಸಿ ಸಾಮಾನ್ಯ ರೀತಿಯಲ್ಲಿ ಅದೇ ದಿನ ಪುರಭವನದಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಶಾಸಕರು ತಿಳಿಸಿದರು.
ಜೊತೆಗೆ ನಮ್ಮ ಖುಷಿಗಾಗಿ ಇನ್ನೊಬ್ಬರಿಗೆ ನೋವು ಕೊಡುವುದು ಸರಿಯಲ್ಲ ಎನ್ನುವ ಮಾತಿನಂತೆ ಶಾಸಕರಿಂದು “ನಮ್ಮ ಖುಷಿ ಇನ್ನೊಬ್ಬರಿಗೆ ನೋವು ತರಬಾರದು” ಅದಕ್ಕಾಗಿ ಪುತ್ತೂರಿನಲ್ಲಿ ನಡೆಯಬೇಕಾಗಿದ್ದ ಮೆರವಣಿಗೆಯನ್ನು ರದ್ದುಗೊಳಿಸಿ ಸಾಮಾನ್ಯ ರೀತಿಯಲ್ಲಿ ಕಾರ್ಯಕ್ರಮ ನಡೆಸುವುದು ಒಳಿತು ಎಂದು ಶಾಸಕರು ಕಾರ್ಯಕರ್ತರಿಗೆ ತಿಳಿಸಿದ್ದಾರೆ.