February 4, 2026

ಮಂಗಳೂರು: ಹಣಕಾಸು ವಂಚನೆ: ಮುಂಬೈ ಉದ್ಯಮಿ ವಿಶ್ವನಾಥ್ ಶೆಟ್ಟಿ ಬಂಧನ

0
IMG-20230531-WA0059.jpg

ಮಂಗಳೂರು: ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ ಶೆಟ್ಟಿ ಅವರನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆ ಮುಂಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇನ್ನು ಮಂಗಳೂರಿನ ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕರಾದ ರೋಹನ್ ಮೊಂತೆರೋ ಮತ್ತು ತೊಕ್ಕೊಟ್ಟಿನ ಹರ್ಷ ಫೈನಾನ್ಸ್ ಮಾಲೀಕ ಹರೀಶ್ ಎಂಬವರಿಗೆ, 1.75 ಕೋಟಿ ರೂ.ಗಳನ್ನು ವಿಶ್ವನಾಥ್ ಶೆಟ್ಟಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!