December 4, 2024

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

0

ಕೋಲಾರ: ಖತರ್ನಾಕ್‌ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಮುಗಿಸಿದ್ದಾಳೆ. ಅಲ್ಲದೇ ಅದನ್ನು ಅಪಘಾತವೆಂದು ಬಿಂಬಿಸಲು ಹೋಗಿ ಪೊಲೀಸರಿಗೆ ತಗಲಾಕಿಕ್ಕೊಂಡಿರುವ ಘಟನೆ ಕೋಲಾರ ತಾಲೂಕಿನಲ್ಲಿ ನಡೆದಿದೆ.

ಕೋಲಾರ ತಾಲೂಕಿನ ಕನ್ನಘಟ್ಟ ಬಳಿ ಘಟನೆ ನಡೆದಿದ್ದು ಮೃತನ ಪತ್ನಿ ಸೌಮ್ಯಾ, ಆಕೆಯ ಪ್ರಿಯಕರ ಚೊಕ್ಕರೆಡ್ಡಪಲ್ಲಿ ಶ್ರೀಧರ್ ಮತ್ತವನ ಸ್ನೇಹಿತನನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಜಾನಪದ ಕಲಾವಿದ ಜನ್ನಘಟ್ಟ ಕೃಷ್ಣ ಮೂರ್ತಿ, ಸೌಮ್ಯಾಳ ಪತಿ.

ಸೋಮವಾರ ರಾತ್ರಿ ಪ್ರಿಯಕರ ಮತ್ತವನ ಸ್ನೇಹಿತನ ಜೊತೆ ಸೇರಿದ ಆರೋಪಿ ಸೌಮ್ಯಾ ಪತಿಯನ್ನ ಹತ್ಯೆ ಮಾಡಿಸಿದ್ದಾಳೆ. ಬಳಿಕ ಎಸ್ಕೇಪ್‌ ಆಗಲು, ತನ್ನ ಪತಿ ಬೈಕ್‌ನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಬಿಂಬಿಸಿದ್ದಳು. ಆದ್ರೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಅನುಮಾನ ಮೂಡಿತ್ತು. ಸೌಮ್ಯಾಳನ್ನ ವಿಚಾರಣೆಗೆ ಒಳಪಡಿಸಿದಾಗ ಬಣ್ಣ ಬಯಲಾಗಿ ತಗಲಾಕಿಕೊಂಡಿದ್ದಾಳೆ. ಆರೋಪಿಗಳನ್ನ ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!