March 25, 2026

ಕುಂದಾಪುರ: ಈಜಲು ತೆರಳಿದ್ದ ಮದರ್ ಥೇರಸಾ ಕಾಲೇಜಿನ ಉಪನ್ಯಾಸಕ ಸೇರಿ ಇಬ್ಬರು ನೀರುಪಾಲು

0
image_editor_output_image45184779-1685425639284.jpg

ಕುಂದಾಪುರ: ತಾಲೂಕಿನ ಕಂದಾವರ ಗ್ರಾಮದ ಉಳ್ಳೂರು – ಕಾಡಿನಕೊಂಡ ಎಂಬಲ್ಲಿ ಕಂದಾವರ ಡಂಪಿಂಗ್ ಯಾರ್ಡ್‌ ಹತ್ತಿರದ ಮದಗಗಕ್ಕೆ ಈಜಲು ತೆರಳಿದ್ದ ಶಂಕರನಾರಾಯಣ ಮದರ್ ಥೇರಸಾ ಕಾಲೇಜಿನ ಉಪನ್ಯಾಸಕ ಸೇರಿ ಇಬ್ಬರು ನೀರು ಪಾಲಾಗಿದ್ದಾರೆ.

ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ (28) ಶಂಕರನಾರಾಯಣ ಹೈಸ್ಕೂಲ್ ವಿದ್ಯಾರ್ಥಿ ಭರತ್ ಶೆಟ್ಟಿಗಾರ (15) ನೀರಲ್ಲಿ ಮುಳುಗಿ ಮೃತರಾಗಿದ್ದಾರೆ.

ನಾಲ್ಕು ಎಕರೆ ವಿಸ್ತಾರದ ಮದಗಕ್ಕೆ ವಾರಾಹಿ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿದು ಬಂದಿರುವ ಉಳ್ಳೂರು – ಕಂದಾವರದ ಬೊಬ್ಬಯ೯ ಕೊಡ್ಲು ಮದಗಕ್ಕೆ 6 ಜನ ಈಜಲು ತೆರಳಿದ್ದಾರೆ.

ಸುಮಾರು 10 ಪೀಟ್ ನೀರಿರುವ ಮದಗದಲ್ಲಿ ಭರತ್ ಆಯತಪ್ಪಿ ಮುಳುಗಿದ್ದನ್ನು ನೋಡಿದ ರಾಜೇಂದ್ರ ರಕ್ಷಣೆಗೆ ತೆರಳಿದಾಗ ಈಜು ಬಾರದ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!