ನಂದಿಬೆಟ್ಟಕ್ಕೆಂದು ತೆರಳಿದ್ದ ನಾಲ್ವರು ಯುವಕರು ಕೆರೆ ನೀರಿನಲ್ಲಿ ಮುಳುಗಿ ಮೃತ್ಯು
ದೇವನಹಳ್ಳಿ: ದೇವನಹಳ್ಳಿ ತಾಲೂಕಿನ ರಾಮನಾಥಪುರದ ಕೆರೆಗೆ ಯವಕರ ತಂಡವೊಂದು ಈಜಲು ಹೋಗಿ ನೀರುಪಾಲಾಗಿರುವ ಘಟನೆ ನಡೆದಿದೆ.
ಮೃತರನ್ನು ಬೆಂಗಳೂರಿನ ಆರ್.ಟಿ.ನಗರದ ಶೇಖ್, ತೋಹಿದ್, ಶಾಹಿದ್, ಫೈಜಲ್ ಎಂದು ಗುರುತಿಸಲಾಗಿದೆ.
ನಂದಿಬೆಟ್ಟಕ್ಕೆಂದು ತೆರಳಿದ್ದ ಯುವಕರು ಕೆರೆಯಲ್ಲಿ ಈಜಲು ಇಳಿದಿದ್ದರು. ಅದರಲ್ಲಿ ಒಬ್ಬ ನೀರಿನಲ್ಲಿ ಮುಳುಗಿದ್ದನು. ಆತನನ್ನು ರಕ್ಷಿಸಲು ಹೋಗೀ ನಾಲ್ವರು ಮುಳುಗಿ ನೀರುಪಾಲಾಗಿದ್ದರೆ ಎಂದು ಹೇಳಲಾಗಿದೆ.
ಈ ಘಟನೆಯ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.
ಇನ್ನು ಈ ಪ್ರಕರಣ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.