ಕೊಳ್ನಾಡು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ: ಎ.ಬಿ ಅಬ್ದುಲ್ಲ, ಮಹಮ್ಮದ್ ಮಂಚಿ, ರಾಜೇಶ್ ಮೂವರು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ

ಬಂಟ್ವಾಳ: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಬಂಟ್ವಾಳ ತಾ. ಕೊಳ್ನಾಡು ಗ್ರಾಮದ ಮೂವರು ಪಂಚಾಯತ್ ಸದಸ್ಯರು ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.
ಕಾಂಗ್ರೆಸ್ ಪಕ್ಷದ A.B.ಅಬ್ದುಲ್ಲಾ, ಮಹಮ್ಮದ್ ಮಂಚಿ, ರಾಜೇಶ್ ಬಾರೆಬೆಟ್ಟು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಗೊಂಡ ಸದಸ್ಯರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದಾಗಿ ಜಯಗಳಿಸಿದ ಬಳಿಕ ಅಧಿಕಾರಕ್ಕಾಗಿ ಈ ಹಿಂದೆ ಬಿಜೆಪಿ ಸದಸ್ಯರ ಜೊತೆ ಕೈಜೋಡಿಸಿದ್ದ ಆರೋಪದಡಿ ಉಚ್ಚಾಟಿಸಲಾಗಿದೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ, ವಿಟ್ಲ ಪಡ್ನೂರು ಸಹಕಾರಿ ಸಂಘದ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರು ಎಂಬ ಆರೋಪದ ಹಿನ್ನಲೆ ವೀಕ್ಷಕರ ತಂಡ ಆಗಮಿಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿತ್ತು.
ಈ ಅಭಿಪ್ರಾಯದ ಹಿನ್ನಲೆ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮೂವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ.