March 16, 2026

ಉಡುಪಿ: ಕಾಂಕ್ರೀಟ್ ಮಿಕ್ಸರ್‌‌ಗೆ ಢಿಕ್ಕಿಯಾದ ಕಂಟೇನರ್ ಲಾರಿ: ಲಾರಿ ಚಾಲಕನಿಗೆ ಗಂಭೀರ ಗಾಯ

0
IMG-20230527-WA0028.jpg

ಉಡುಪಿ: ಕಾಂಕ್ರೀಟ್ ಮಿಕ್ಸರ್‌‌ಗೆ ನಿಯಂತ್ರಣ ತಪ್ಪಿದ ಕಂಟೇನರ್ ಲಾರಿ ಢಿಕ್ಕಿಯಾದ ಘಟನೆ ಉದ್ಯಾವರ ಸೇತುವೆ ಬಳಿಯ ಫಾರೆಸ್ಟ್ ಗೇಟ್ ಎಂಬಲ್ಲಿ ನಡೆದಿದೆ.

ಕಂಟೇನರ್ ಲಾರಿ ಹಿಂದಿನಿಂದ ಬಂದು ಕಾಂಕ್ರೀಟ್ ಮಿಕ್ಸರ್‌‌ಗೆ ಢಿಕ್ಕಿ ಹೊಡೆದಿದ್ದು, ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡು ಲಾರಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.

ಇನ್ನು ಲಾರಿ ಚಾಲಕನಿಗೆ ತೀವ್ರ ಗಾಯಗೊಂಡಿದ್ದು, ಚಾಲಕನನ್ನು ಹೊರ ತೆಗೆಯಲು ಸಾರ್ವಜನಿಕರು ಹರಸಾಹಸ ಪಟ್ಟಿದ್ದಾರೆ.

ಕಾಪು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಿಂದ ಸ್ಥಳದಲ್ಲಿ ಟ್ರಾಫಿಕ್ ಜಾಂ ಉಂಟಾಗಿತ್ತು.

Leave a Reply

Your email address will not be published. Required fields are marked *

error: Content is protected !!