December 15, 2025

ಜಮೀಯ್ಯತುಲ್ ಫಲಾಹ್ ಮತ್ತು ಎಂ.ಫ್ರೆಂಡ್ಸ್ ತಂಡದಿಂದ ನಾಲೆಡ್ಜ್ ಸಿಟಿಗೆ ಭೇಟಿ: ಗ್ರಾಂಡ್ ಮುಫ್ತಿ, ಹಕೀಂ ಅಝ್ಹರಿ ಜೊತೆಗೆ ಮಾತುಕತೆ: ಅಶಕ್ತ ಕಾನೂನು ವಿದ್ಯಾರ್ಥಿಗಳಿಗೆ ಪ್ರಾಯೋಜಕತ್ವ

0
IMG-20230527-WA0023.jpg

ಕೋಝಿಕೋಡ್; ಇಲ್ಲಿನ ಮರ್ಕಝ್ ನಾಲೆಡ್ಜ್ ಸಿಟಿಗೆ ಬಂಟ್ವಾಳ ಜಮೀಯ್ಯತುಲ್ ಫಲಾಹ್ ಹಾಗೂ ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ 35 ಮಂದಿ ಸದಸ್ಯರು ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಭೇಟಿ ನೀಡಿದರು.

ಈ ಸಂದರ್ಭ ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹಾಗೂ ಅಬ್ದುಲ್ ಹಕೀಂ ಅಝ್ಹರಿ ಅವರನ್ನು ಭೇಟಿ ಮಾಡಿ ಮರ್ಕಝ್ ನಾಲೆಡ್ಜ್ ಸಿಟಿಯ ಮಾಹಿತಿ ಪಡೆಯಿತು. ಇದೇ ಸಂದರ್ಭ ಕಾನೂನು ವಿದ್ಯಾರ್ಥಿಗೆ ಸಹಾಯಧನ ನೀಡಲಾಯಿತು. ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಅವರು ಗ್ರಾಂಡ್ ಮುಫ್ತಿ ಮತ್ತು ಹಕೀಂ ಅಝ್ಹರಿ ಅವರನ್ನು ಸನ್ಮಾನಿಸಿದರು.

ಎಂ.ಎಚ್. ಇಕ್ಬಾಲ್ ಮೆಲ್ಕಾರ್, ಪಿ.ಎಸ್. ಅಬ್ದುಲ್ ಹಮೀದ್ ಪಾಣೆಮಂಗಳೂರು, ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ, ಆರಿಫ್ ಪಡುಬಿದ್ರಿ, ಕೆ.ಕೆ. ಶಾಹುಲ್ ಹಮೀದ್, ಸಿ.ಎಚ್. ಗಫೂರ್, ಶರೀಫ್ ಮೂಡಬಿದ್ರಿ, ಶಾಕಿರ್ ಹಾಜಿ ಪುತ್ತೂರು, ಡಿ.ಪಿ. ಮಹಮ್ಮದ್ ಸಿದ್ದೀಕ್, ಮಹಮ್ಮದ್ ಸಾಗರ್ ಬಿ.ಸಿ.ರೋಡ್, ಶೇಖ್ ರಹ್ಮತುಲ್ಲಾ, ಹಸನಬ್ಬ, ಪಿ. ಮಹಮ್ಮದ್, ಅಬೂಬಕರ್ ಪುತ್ತು ಉಪ್ಪಿನಂಗಡಿ, ಹಕೀಮ್ ಕಲಾಯಿ, ಬಿ.ಎಂ. ತುಂಬೆ, ವಿ.ಎಚ್. ಅಶ್ರಫ್, ಹಸೈನಾರ್ ಗುರುವಾಯನಕೆರೆ, ಮಹಮ್ಮದ್ ಕುಕ್ಕುವಳ್ಳಿ, ರಫೀಕ್ ಕಲ್ಲಡ್ಕ, ಶಾಕಿರ್ ಅಳಕೆಮಜಲ್, ಅನ್ಸಾರ್ ಬೆಳ್ಳಾರೆ, ಶೇಖ್ ಇಸಾಕ್ ಕೋಡಿಂಬಾಡಿ, ಮಹಮ್ಮದ್ ಟೋಪ್ಕೋ, ಸಮೀರ್, ಅಶ್ರಫ್, ಉಬೈದ್ ವಿಟ್ಲ, ಸುಲೈಮಾನ್ ಸೂರಿಕುಮೇರು, ಹನೀಫ್ ಕುದ್ದುಪದವು, ಅಬ್ಬಾಸ್ ಕಲ್ಲಂಗಳ, ಆಶಿಕ್ ಕುಕ್ಕಾಜೆ, ಮೂನಿಷ್, ಅಫ್ವಾನ್ ತಂಡದಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!