March 16, 2026

ಕಲುಷಿತ ನೀರು ಸೇವಿಸಿ ಬಾಲಕ  ಸಾವು: 30 ಕ್ಕೂ ಹೆಚ್ಚು ಜನರು ಅಸ್ವಸ್ಥ

0
image_editor_output_image868265709-1685165049006.jpg

ರಾಯಚೂರು: ಕಲುಷಿತ ನೀರು ಸೇವಿಸಿ ಬಾಲಕ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ನಡೆದಿದೆ. 30 ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿದ್ದಾರೆ.

ನೀರು ಸರಬರಾಜು ಮಾಡುವ ಪೈಪ್ ಲೈನ್‌ಗೆ ಚರಂಡಿ ನೀರು ಸೇರುತ್ತಿದ್ದು ಕಳೆದ 2-3 ದಿನಗಳಿಂದ ಜನರು ಅಸ್ವಸ್ಥರಾಗುತ್ತಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ 5 ವರ್ಷದ ಬಾಲಕ ಹನುಮೇಶ್ ಸಾವನ್ನಪ್ಪಿದ್ದಾನೆ.

ಮಕ್ಕಳು, ಮಹಿಳೆಯರು ಸೇರಿ 30 ಕ್ಕೂ ಹೆಚ್ಚು ಜನ ವಾಂತಿ ಭೇದಿಯಿಂದ ರಾಯಚೂರಿನ ರಿಮ್ಸ್, ಅರಕೇರಾ, ದೇವದುರ್ಗದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!